ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಐದಾರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು ಮತ್ತು ಘಟಪ್ರಬಾ ಎಡದಂಡೆ ಕಾಲುವೆ ಮೂಲಕ ಬನಹಟ್ಟಿಯ ಕೆರೆಗೆ ನೀರು ಬಿಟ್ಟಿರುವುದರಿಂದ ಹೆಚ್ಚುವರಿ ನೀರು ಹಳ್ಳದ ಮೂಲಕ ಕೃಷ್ಣಾ ನದಿ ಸೇರುತ್ತಿದೆ.
ಕೆರೆಯಿಂದ ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಹರಿದು ಬರುತ್ತಿರುವುದರಿಂದ ಹಳ್ಳಕ್ಕೆ ನಿರ್ಮಿಸಲಾದ ಬಾಂದಾರ್‌ಗಳು ತುಂಬಿ ಹರಿಯುತ್ತಿವೆ. ಬಾಂದಾರ್‌ಗಳಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುವುದರಿಂದ ಸುತ್ತಲಿನ ತೋಟ ಮತ್ತು ಹೊಲಗಳಲ್ಲಿರುವ ಬಾವಿ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಇದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ರೈತರಾದ ಸಿದ್ದು ಗೌಡಪ್ಪನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.