ADVERTISEMENT

ಘಟನೆಗೆ ರಾಜಕೀಯ ಬಣ್ಣ ಬೇಡ: ಆರ್.ಬಿ.ತಿಮ್ಮಾಪೂರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:27 IST
Last Updated 21 ಫೆಬ್ರುವರಿ 2026, 8:27 IST
<div class="paragraphs"><p>ಆರ್.ಬಿ.ತಿಮ್ಮಾಪೂರ</p></div>

ಆರ್.ಬಿ.ತಿಮ್ಮಾಪೂರ

   

ಬಾಗಲಕೋಟೆ: ನಗರದಲ್ಲಿ ಗುರುವಾರ ನಡೆದ ಕಲ್ಲು ತೂರಾಟದ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇದನ್ನು ಸರ್ಕಾರ ಸಹಿಸುವುದೂ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮದ ಅಚರಣೆಗೆ ತೊಡಕುಂಟು ಮಾಡುವುದು ತಪ್ಪು. ಜೊತೆಗೆ ಇಂತಹ ಘಟನೆಗಳು ನಡೆಯಲು ಪ್ರಚೋದನಾತ್ಮಕ ಹೇಳಿಕೆ ನೀಡುವುದನ್ನು ಸಹ ಸರ್ಕಾರ ಸಹಿಸದು ಎಂದರು.

ADVERTISEMENT

ಗುರುವಾರದ ಘಟನೆಯ ಸಂಬಂಧ ಈಗಾಗಲೇ ಪೊಲೀಸರು 8 ಜನರನ್ನು ಬಂಧಿಸಿದ್ದು, ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಯಾವುದೇ ವ್ಯಕ್ತಿ ತಪ್ಪಿತಸ್ಥನಾಗಿದ್ದರೆ ಅಂತವರ ವಿರುದ್ಧ ಕಠಿಣವಾದ ಕ್ರಮಕೈಗೊಳ್ಳಲಾಗುವುದು. ನಗರದ ಎಲ್ಲ ಸಮಾಜದ ಜನ ಶಾಂತ ರೀತಿಯಿಂದ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕು ಎಂದು ಅವರು ಮನವಿ ಮಾಡಿದರು.

ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಜನರೂ ಸಹ ಭಾವೋದ್ವೇಗಕ್ಕೆ  ಒಳಗಾಗಿ ರಾಜಕೀಯ ಬಲೆಗೆ ಬೀಳಬಾರದು. ಎಲ್ಲ ಧರ್ಮೀಯರು ಶಾಂತಿ, ಸೌಹಾರ್ದತೆಯಿಂದ ಇರಬೇಕು. ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆದು ನಿಶ್ಚಿತವಾಗಿಯೂ ತಪ್ಪಿತಸ್ಥರ ವಿರುದ್ಧ ಪೊಲೀಸ್‌ ಇಲಾಖೆ ಕಠಿಣವಾದ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.