ADVERTISEMENT

ಗುಳೇದಗುಡ್ಡ: ಆರ್‌ಎಸ್‍ಎಸ್ ಮಹಿಳಾ ಘಟಕದಿಂದ ಆಕರ್ಷಕ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:12 IST
Last Updated 29 ಡಿಸೆಂಬರ್ 2025, 4:12 IST
ಗುಳೇದಗುಡ್ಡ ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮೀತಿ ಮಹಿಳಾ ಘಟಕದಿಂದ ಭಾನುವಾರ  ಆಕರ್ಷಕ ಪಥ ಸಂಚಲನ ಜರುಗಿತು 
ಗುಳೇದಗುಡ್ಡ ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮೀತಿ ಮಹಿಳಾ ಘಟಕದಿಂದ ಭಾನುವಾರ  ಆಕರ್ಷಕ ಪಥ ಸಂಚಲನ ಜರುಗಿತು    

ಗುಳೇದಗುಡ್ಡ: ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಮಹಿಳಾ ಘಟಕದಿಂದ ಭಾನುವಾರ ಸಂಜೆ 4 ಗಂಟೆಗೆ ಆಕರ್ಷಕ ಪಥ ಸಂಚಲನ ಜರುಗಿತು.

ಪಟ್ಟಣದ ಸರಸ್ವತಿ ವಿದ್ಯಾಮಂದಿರದಿಂದ ಆರಂಭವಾದ ಪಥ ಸಂಚಲನ ಸರಾಫ್ ಬಜಾರ, ಕಂಠಿಪೇಟೆ, ಚೌಬಜಾರ, ಅರಳಿಕಟ್ಟಿ ಮೂಲಕ ಭಂಡಾರಿ ಕಾಲೇಜು ಸರ್ಕಲ್ ಹೊಸಪೇಟೆ ಸಾಲೇಶ್ವರ ದೇವಸ್ಥಾನ ಪುರಸಭೆ ಮೂಲಕ ವೆಂಕಟೇಶ್ವರ ಪ್ರೌಢಶಾಲಾ ಮೈದಾನ ತಲುಪಿತು.

ಬಹಳ ಶಿಸ್ತು ಬದ್ದತೆಯಿಂದ ಸಾಕಿದ ಪಥ ಸಂಚಲನದಲ್ಲಿ ಮಕ್ಕಳು ಭಾಗವಹಿಸಿದ್ದರು. ಪಥ ಸಂಚಲನದುದ್ದಕ್ಕೂ ಹಿಂದೂ ನಾಯಕರ ಜಯಘೋಷಣೆಗಳನ್ನು ಕೂಗಿದರು. ಪಥ ಸಂಚಲನದ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಹಾಕಿ, ಸ್ವಾಗತ ಕಮಾನು ಕಟ್ಟಿ ಹೂ ಚೆಲ್ಲುವ ಮೂಲಕ ಪಥಸಂಚಲನದಲ್ಲಿ ಪಾಲ್ಗೊಂಡ ಸ್ವಯಂ ಸೇವಕರಿಗೆ ಸ್ವಾಗತಿಸಿದರು.

ADVERTISEMENT

ನಂತರ ಸಂಜೆ 5 ಗಂಟೆಗೆ ಜರುಗಿದ ಸಭಾ ಕಾರ್ಯಕ್ರಮ ಜರುಗಿತು. ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಜಿಲ್ಲಾ ಕಾರ್ಯವಾಹಿಕಾ ರಾಷ್ಟ್ರ ಸೇವಿಕಾ ಸಮಿತಿಯ ವಕ್ತಾರರಾದ ಅನುಷಾ ಕೌಶಿಕ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಟ್ಟಣದ ಕಾರ್ಯವಾಹಿಕಾ ರಾಷ್ಟ್ರ ಸೇವಿಕಾ ಸಮಿತಿಯ ಮಂಜುಳಾ ಚಮಚಿ ಮುಂತಾದವರಿದ್ದರು.

ಗುಳೇದಗುಡ್ಡ ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮೀತಿ ಮಹಿಳಾ ಘಟಕದಿಂದ ಭಾನುವಾರ ಸಾಯಂಕಾಲ 4 ಗಂಟೆಗೆ  ಆಕರ್ಷಕ ಪಥ ಸಂಚಲನ ಜರುಗಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.