ADVERTISEMENT

ಬಾಗಲಕೋಟೆ: ಗ್ರಹಣ ವೀಕ್ಷಣೆಗೆ ಸೋಲಾರ್ ಗ್ಲಾಸ್ ವ್ಯವಸ್ಥೆ

ಕೋರ್‌ವಿಜ್ಞಾನ ಕೇಂದ್ರದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 1:56 IST
Last Updated 26 ಡಿಸೆಂಬರ್ 2019, 1:56 IST
ಸೂರ್ಯಗ್ರಹಣ ವೀಕ್ಷಣೆಗೆ ಬಾಗಲಕೋಟೆಯ ಕೋರ್ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವ ಸೋಲಾರ್‌ ಗ್ಲಾಸ್
ಸೂರ್ಯಗ್ರಹಣ ವೀಕ್ಷಣೆಗೆ ಬಾಗಲಕೋಟೆಯ ಕೋರ್ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವ ಸೋಲಾರ್‌ ಗ್ಲಾಸ್   

ಬಾಗಲಕೋಟೆ: ಈ ವರ್ಷದ ಮೂರನೇ ಗ್ರಹಣ ಎನಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಇಲ್ಲಿನ ನವನಗರದ ಸೆಕ್ಟರ್ ನಂ 37ರಲ್ಲಿನ ಕೋರ್ ವಿಜ್ಞಾನ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 8.05ರಿಂದ 11.04ರವರೆಗೆ ಸೂರ್ಯಗ್ರಹಣ ಇದ್ದು, ಬರೀಗಣ್ಣಿನಿಂದ ನೋಡುವುದು ಅಪಾಯಕಾರಿ ಎಂಬ ಕಾರಣಕ್ಕೆ ಗ್ರಹಣ ವೀಕ್ಷಣೆಗೆ ಕೋರ್ ವಿಜ್ಞಾನ ಕೇಂದ್ರದಲ್ಲಿ 100 ಸೋಲಾರ್ ಫಿಲ್ಟರ್ ಗ್ಲಾಸ್‌ಗಳನ್ನು ಇಡಲಾಗಿದೆ.

ಅಗಸ್ತ್ಯ ಸಂಸ್ಥೆ ಗ್ರಹಣ ವೀಕ್ಷಣೆಯ ಸಮನ್ವಯ ಮಾಡಲಿದ್ದು, ನವನಗರದ ಸರ್ಕಾರಿ ಶಾಲೆ ನಂ 02,03,05 ಹಾಗೂ 07ರ ಮಕ್ಕಳು, ಸರ್ಕಾರಿ ಪ್ರೌಢಶಾಲೆ, ಆದರ್ಶ ಪ್ರೌಢಶಾಲೆ, ಮೊರಾರ್ಜಿ ವಸತಿಶಾಲೆಯ ಮಕ್ಕಳನ್ನು ಕರೆತರಲಾಗುತ್ತಿದೆ. ಜೊತೆಗೆ ಜಾನಮಟ್ಟಿ ಹಾಗೂ ನೀಲಾನಗರ ಲಂಬಾಣಿ ತಾಂಡಾದ 150 ಮಕ್ಕಳನ್ನು ಗ್ರಹಣ ವೀಕ್ಷಣೆಗೆ ಕರೆತರಲಾಗುತ್ತಿದೆ ಎಂದು ಅಗಸ್ತ್ಯ ಸಂಸ್ಥೆಯ ಸಂತೋಷ ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.