ADVERTISEMENT

ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ₹2.64 ಕೋಟಿ ತೆರಿಗೆ ವಸೂಲಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:22 IST
Last Updated 17 ಜನವರಿ 2026, 5:22 IST
ರಬಕವಿ ಬನಹಟ್ಟಿಯಲ್ಲಿ ಅನೇಕ ಕಡೆಗಳಲ್ಲಿ ನಗರಸಭೆಯ ಅಧಿಕಾರಿಗಳು ತೆರಿಗೆ ಬಾಕಿ ಇರುವ ಅಂಗಡಿಕಾರರಿಗೆ ನೋಟಿಸ್ ನೀಡುತ್ತಿರುವುದು
ರಬಕವಿ ಬನಹಟ್ಟಿಯಲ್ಲಿ ಅನೇಕ ಕಡೆಗಳಲ್ಲಿ ನಗರಸಭೆಯ ಅಧಿಕಾರಿಗಳು ತೆರಿಗೆ ಬಾಕಿ ಇರುವ ಅಂಗಡಿಕಾರರಿಗೆ ನೋಟಿಸ್ ನೀಡುತ್ತಿರುವುದು   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ₹ 2.64 ರಷ್ಟು ತೆರಿಗೆ ವಸೂಲಾತಿಯಾಗಿದೆ. ಒಟ್ಟು 18 ಸಾವಿರ ತೆರಿಗೆದಾರರಿಂದ ₹ 2.75 ಕೋಟಿಯಷ್ಟು ತೆರಿಗೆಯನ್ನು ನಿರೀಕ್ಷೆ ಮಾಡಲಾಗಿತ್ತು. ಈ ತಿಂಗಳ ಕೊನೆಯ ಒಳಗಾಗಿ ಶೇ 100 ಕ್ಕೆ 100ರಷ್ಟು ತೆರಿಗೆಯನ್ನು ವಸೂಲಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.

ನಗರಸಭೆಯ ವ್ಯಾಪ್ತಿಯ 31ವಾರ್ಡ್ ಗಳಲ್ಲಿ ಕಳೆದ 15 ದಿನಗಳಿಂದ ತೆರಿಗೆ ವಸೂಲಾತಿ ಆಂದೋಲನವನ್ನು ನಡೆಲಾಗಿತ್ತು. ಕಟ್ಟಡ ತೆರಿಗೆ, ಉದ್ಯಮ ಪರವಾನಗೆ ಶುಲ್ಕ, ನೀರಿನ ಕರ ಸೇರಿದಂತೆ ತೆರಿಗೆ ಬಾಕಿ ಇರುವ ಮನೆ, ಅಂಗಡಿಗಳಿಗೆ ನಗರಸಭೆಯ ಕಂದಾಯ ನಿರೀಕ್ಷಕ ಬಾಬುರಾವ ಕಮತಗಿ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ತೆರಳಿ ತೆರಿಗೆ ತುಂಬುವಂತೆ ಜಾಗೃತಿಯನ್ನು ಮೂಡಿಸಿದ್ದರು.

ನಗರಸಭೆಯ ಎಲ್ಲ ಕೆಲಸ ಕಾಮಗಾರಿಗಳಿಗೆ ತೆರಿಗೆಯ ಹಣದಿಂದಲೇ ಹಣವನ್ನು ಸಂದಾಯ ಮಾಡಬೇಕಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಆದೇಶ ಮಾಡಿದಂತೆ ಶೇ 100 ರಷ್ಟು ತೆರಿಗೆ ವಸೂಲಾತಿಯನ್ನು ಜನೆವರಿ ತಿಂಗಳ ಒಳಗಾಗಿ ಮಾಡಬೇಕಾಗಿದೆ. ಶೇ 100 ರಷ್ಟು ತೆರಿಗೆಯನ್ನು ಮಾಡಿದ ಮಾತ್ರ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನಗಳನ್ನು ಮಾಡುತ್ತವೆ ಎಂದು ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.