
ಕೆರೂರ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗಸ್ಟ್ 28 ರಂದು ಬೆಳಿಗ್ಗೆ 10ಕ್ಕೆ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆಯಲಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಘೋಷಣೆಯಾಗಿರುವುದರಿಂದ ಎರಡೂ ಪಕ್ಷಗಳಲ್ಲಿ ಅಧಿಕಾರದ ಜಟಾಪಟಿ ತಾರಕಕ್ಕೇರಿದೆ.
20 ಸದಸ್ಯರ ಬಲ ಹೊಂದಿರುವ ಸ್ಥಳಿಯ ಪಟ್ಟಣ ಪಂಚಾಯ್ತಿಯಲ್ಲಿ 9 ಬಿಜೆಪಿ, 6 ಕಾಂಗ್ರೆಸ್, 3 ಬಿಜೆಪಿ ಬೆಂಬಲಿತ ಪಕ್ಷೇತರರು, ಇಬ್ಬರು ಕಾಂಗ್ರೆಸ್ ಬೆಂಬಲಿತ ಪಕ್ಷೇತರರು ಇದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬದಲಾವಣೆ ಗಾಳಿ ಜೋರಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೇರಿವೆ.
ಬಿಜೆಪಿ ಸದಸ್ಯರು ಸ್ಪಷ್ಟ ಬಹುಮತದ ಸಂಖ್ಯಾಬಲ ಹೊಂದಿದ್ದರೂ ಅಧಿಕಾರ ಚುಕ್ಕಾಣಿ ಹಿಡಿಯುವ ಪೈಪೋಟಿಯಲ್ಲಿದ್ದಾರೆ. ಇದರ ಲಾಭವನ್ನು ಪಡೆದುಕೊಳ್ಳುವಲ್ಲಿ ಕಾಂಗ್ರೆಸ್ ಸದಸ್ಯರು ಕಾದು ಕುಳಿತಿದ್ದಾರೆ. ಎರಡೂಪ ಕ್ಷಗಳಲ್ಲಿ ಇನ್ನೂ ಕೂಡ ಅಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮವಾಗಿಲ್ಲ.
ಒಟ್ಟಾರೆ ಎರಡೂ ಪಕ್ಷಗಳಲ್ಲಿಯ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದರೆ ಅಧಿಕಾರದ ಆಸೆಗಾಗಿ ಸದಸ್ಯರು ಪಕ್ಷದಿಂದ ಪಕ್ಷಕ್ಕೆ ಹಾರುವ ಸಾಧ್ಯತೆಗಳು ಮೇಲ್ನೋಟಕ್ಕೆ ಕಂಡುಬಂದೆ. ಸದ್ಯ ಪ್ರವಾಸದಲ್ಲಿರುವ ಎಲ್ಲ ಸದಸ್ಯರು ನೇರವಾಗಿ ಬುಧವಾರ ನಡೆಯಲಿರುವ ಮತದಾನಕ್ಕೆ ನೇರವಾಗಿ ಬರಲಿದ್ದಾರೆ.
ಬಿಜೆಪಿ ಬೆಂಬಲಿತ ಕಾಂಗ್ರೆಸ್ ಸದಸ್ಯನಿಗೆ ಅಧ್ಯಕ್ಷಗಿರಿಯೋ ಅಥವಾ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯನಿಗೆ ಅಧ್ಯಕ್ಷಗಿರಿಯೋ ಎಂಬುದು ಚುನಾವಣೆ ಫಲಿತಾಂಶ ನಂತರ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.