
ಬಾಗಲಕೋಟೆ: ಜಿಲ್ಲೆಯ ಬನಶಂಕರಿ ಜಾತ್ರೆಯಲ್ಲಿರುವ ಬಿಎಸ್‌ಆರ್ ನಾಟಕ ಕಂಪನಿಯಲ್ಲಿ ಜ.18, 19ರಂದು ಮಧ್ಯಾಹ್ನ 3.30ಕ್ಕೆ ನಟಿ ಉಮಾಶ್ರಿ ಅಭಿನಯದ ‘ಶರ್ಮಿಷ್ಠೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾಟಕಕಾರ ರಾಜಣ್ಣ ಜೇವರ್ಗಿ, ಏಕವ್ಯಕ್ತಿ ಪ್ರದರ್ಶನ ಇದಾಗಿದ್ದು, 90 ನಿಮಿಷಗಳ ನಾಟಕವಿದೆ ಎಂದರು.
ಚಿದಂಬರ ರಾವ್ ಜಂಬೆ ನಿರ್ದೇಶಿಸಿದ್ದು, ನಾಟಕ, ಚಲನಚಿತ್ರ, ರಾಜಕೀಯದಲ್ಲಿ ಹೆಸರು ಮಾಡಿರುವ ಉಮಾಶ್ರೀ ಅಭಿನಯಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರದರ್ಶನಗೊಂಡಿದ್ದ ನಾಟಕವನ್ನು, ಉತ್ತರ ಕರ್ನಾಟಕದಲ್ಲಿಯೂ ಪ್ರದರ್ಶಿಸಬೇಕು ಎಂಬ ಉದ್ದೇಶದಿಂದ ಆಯೋಜನೆ ಮಾಡಲಾಗಿದೆ ಎಂದರು.
ನಮ್ಮ ತಂಡದ ‘ಮುತ್ತಿನಂತ ಅತ್ತಿಗೆ’ ನಾಟಕ ಉತ್ತಮ ಪ್ರದರ್ಶನಗೊಳ್ಳುತ್ತಿದ್ದು, ಚಳಿಯಿಂದಾಗಿ ಆರಂಭದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ಈಗ ಮೂರ್ನಾಲ್ಕು ದಿನಗಳಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ನಾಟಕದಲ್ಲಿ ಯಾವುದೇ ಅಶ್ಲೀಲ ಸಂಭಾಷಣೆಗಳಿರುವುದಿಲ್ಲ. ಮಹಿಳಾ ಪ್ರೇಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಹೇಳಿದರು.
ರೇಣುಕಾ, ಶರಣಪ್ಪ ಮಾವಿನಮರದ, ಜಗದೀಶ ಹಿರೇಮಠ, ಮಹಾಬಳೇಶ್ವರ ಗುಡಗುಂಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.