ADVERTISEMENT

ಬಾಗಲಕೋಟೆ: ವೀರಭದ್ರೇಶ್ವರ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:05 IST
Last Updated 10 ಡಿಸೆಂಬರ್ 2025, 4:05 IST
ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು
ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು   

ಬಾಗಲಕೋಟೆ: ಸಮೀಪದ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಶೃದ್ಧಾಭಕ್ತಿಯಿಂದ ಅದ್ದೂರಿಯಾಗಿ ಜರುಗಿತು.

ಕಾರ್ತೀಕೋತ್ಸವ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದ ವೀರಭದ್ರೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ರುದ್ರಪಠಣ, ಮಹಾಮೃತ್ಯುಂಜಯ ಮಂತ್ರ ಪಠಣದೊಂದಿಗೆ ಪುಷ್ಪಾಂಲಕಾರ, ಮಹಾಮಂಗಳಾರುತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು,.

ಬೆಣ್ಣೂರಿನಿಂದ ತಂದ ಕಳಸ ಪ್ರತಿಷ್ಠಾಪಿಸಿ ಹಾಗೂ ವೀರಾಪುರದಿಂದ ತಂದಂತ ಹಗ್ಗವನ್ನು ರಥಕ್ಕೆ ಜೋಡಿಸಲಾಯಿತು. ಸಿಮಿಕೇರಿ, ಯಂಡಿಗೇರಿ ಹಾಗೂ ಮುಚಖಂಡಿಯಿಂದ ನಂದಿಕೋಲು ತರಲಾಯಿತು.

ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ದೇವಸ್ಥಾನದಿಂದ ಗ್ರಾಮದ ಅಗಸಿ ಬಾಗಿಲವರಗೆ ರಥೋತ್ಸವ ಸಾಗಿತು. ಚುರುಮುರಿ, ಬಾಳೆ ಹಣ್ಣು, ಉತ್ತತ್ತಿ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ವೀರಭದ್ರ ದೇವರ ಜಯಕಾರ ಜೋರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.