ADVERTISEMENT

ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 0:20 IST
Last Updated 10 ಫೆಬ್ರುವರಿ 2026, 0:20 IST
ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆಯಲ್ಲಿ ನಡೆಯುತ್ತಿರುವ ಉತ್ಖನನ ವೀಕ್ಷಣೆಗೆ ಜನರು ಬಂದಿರುವುದು
ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆಯಲ್ಲಿ ನಡೆಯುತ್ತಿರುವ ಉತ್ಖನನ ವೀಕ್ಷಣೆಗೆ ಜನರು ಬಂದಿರುವುದು   

ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಆದಿಮಾನವನ ಅಸ್ಥಿಪಂಜರಗಳು ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ತೆಕ್ಕಲಕೋಟೆಯ ಗೌಡ್ರಮೂಲೆ ಬೆಟ್ಟ ಪ್ರದೇಶಕ್ಕೆ ಸೋಮವಾರ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.

ಇದರಿಂದ ಉತ್ಖನನಕ್ಕೆ ಅಡ್ಡಿಯಾಯಿತು. ಶಾಲಾ ವಿದ್ಯಾರ್ಥಿಗಳು, ಅಧ್ಯಯನಾಸಕ್ತರು, ಸ್ಥಳೀಯ ಗ್ರಾಮಸ್ಥರು, ಮುಖಂಡರು, ರಾಜಕೀಯ ವ್ಯಕ್ತಿಗಳು ಉತ್ಖನನ ವೀಕ್ಷಿಸಿದರು.

ಜನರ ವರ್ತನೆಯಿಂದ ಬೇಸರಗೊಂಡ ಉತ್ಖನನ ತಂಡದ ಸಹನಿರ್ದೇಶಕಿ ನಮಿತಾ ಎಸ್‌. ಸುಗಂಧಿ ಅವರು ಕಣ್ಣೀರಿಟ್ಟರು. 

ADVERTISEMENT

‘ಇಲ್ಲಿ ಉತ್ಖನನಕ್ಕೆ ನಮಗೆ 2–3 ದಿನಗಳಷ್ಟೇ ಅವಕಾಶವಿದೆ. ದಯವಿಟ್ಟು ಸಹಕರಿಸಿ. ನಮ್ಮ ಕಾರ್ಯಾಚರಣೆ ಬಳಿಕ ಇತಿಹಾಸ ಅಧ್ಯಯನಾಸಕ್ತರು ಉತ್ಖನನ ನಡೆಸಿದರೆ, ಹೆಚ್ಚಿನ ಮಾಹಿತಿ ಜಗತ್ತಿಗೆ ಗೊತ್ತಾಗಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.