ADVERTISEMENT

ಬಳ್ಳಾರಿ: ಮಕ್ಕಳನ್ನು ಶಾಲೆಗೆ ಕಳುಹಿಸಲು ಅಲೆಮಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:19 IST
Last Updated 30 ಆಗಸ್ಟ್ 2025, 7:19 IST
ಹಗರಿಬೊಮ್ಮನಹಳ್ಳಿಯ ಅಲೆಮಾರಿ ಸಿಂದೊಳ್ಳು ಜನಾಂಗದವರು ವಾಸವಾಗಿರುವ ಟೆಂಟ್‍ಗಳಿಗೆ ಬಿಇಒ ಮೈಲೇಶ್ ಬೇವೂರ್ ಮತ್ತು ತಂಡ ಭೇಟಿ ನೀಡಿ ಮಾತುಕತೆ ನಡೆಸಿದರು
ಹಗರಿಬೊಮ್ಮನಹಳ್ಳಿಯ ಅಲೆಮಾರಿ ಸಿಂದೊಳ್ಳು ಜನಾಂಗದವರು ವಾಸವಾಗಿರುವ ಟೆಂಟ್‍ಗಳಿಗೆ ಬಿಇಒ ಮೈಲೇಶ್ ಬೇವೂರ್ ಮತ್ತು ತಂಡ ಭೇಟಿ ನೀಡಿ ಮಾತುಕತೆ ನಡೆಸಿದರು   

ಹಗರಿಬೊಮ್ಮನಹಳ್ಳಿ: ಇಲ್ಲಿನ ಚಿಂತ್ರಪಳ್ಳಿ ರಸ್ತೆಯ ಪಕ್ಕದಲ್ಲಿ ವಾಸವಾಗಿರುವ ಅಲೆಮಾರಿ ಸಿಂದೊಳ್ಳು ಜನಾಂಗದ ಟೆಂಟ್‍ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮತ್ತು ತಂಡ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.

ತಾತ್ಕಾಲಿವಕಾಗಿ ಟೆಂಟ್ ದೇವಸ್ಥಾನದಲ್ಲಿ ಶಾಲೆ ಆರಂಭಿಸಿ ಶಿಕ್ಷಕರನ್ನು ನಿಯೋಜಿಸಲಾಗುವುದು. ಪ್ರತ್ಯೇಕವಾಗಿ ಸಿಂದೊಳ್ಳು ಜನಾಂಗದ ಮಕ್ಕಳಿಗೆ ಶಾಲೆ ಆರಂಭಿಸಿದರೆ ಅಪಾರ್ಥವಾಗುತ್ತದೆ. ಆದ್ದರಿಂದ ಆ ಭಾಗದ ಎಲ್ಲ ಶಾಲೆಗಳಲ್ಲೂ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಅಭ್ಯಂತರವಿಲ್ಲ ಎಂದರು.

ಟೆಂಟ್ ಹಾಕಿಕೊಂಡಿರುವ ಎಲ್ಲ 41 ಮನೆಗಳಿಗೆ ತೆರಳಿದ ಬಿಇಒ ಮನೆಯಲ್ಲಿದ್ದ ಮಕ್ಕಳ ಮಾಹಿತಿ ಪಡೆದರು. ಕೂಡಲೇ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಾಕೀತು ಮಾಡಿದರು. ನಿಮ್ಮಂತೆ ಮಕ್ಕಳು ಆಗಬಾರದು. ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ADVERTISEMENT

ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪರಮೇಶ್ವರಯ್ಯ ಸೊಪ್ಪಿಮಠ್, ಸಿಆರ್‌ಪಿ ಗೌರಮ್ಮ, ಸಿಂದೋಳ ಜನಾಂಗದ ನರಸಿಂಹ ಇದ್ದರು.

ಈ ಕುರಿತು ‘ಪ್ರಜಾವಾಣಿ’ಯಲ್ಲಿ ಆ. 29ರಂದು ‘ಮಕ್ಕಳು ಶಾಲೆಯ ಮುಖವೂ ನೋಡಿಲ್ಲ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.