ADVERTISEMENT

ಬಳ್ಳಾರಿಗೆ ಹೊಸ ಪೊಲೀಸ್‌ ಅಧಿಕಾರಿಗಳು; ಹರ್ಷ ಹೊಸ ಐಜಿಪಿ, ಪನ್ನೇಕರ್ ಎಸ್‌ಪಿ

ಪಿ.ಎಸ್‌ ಹರ್ಷ ಹೊಸ ಐಜಿಪಿ, ಸುಮನ್‌ ಪನ್ನೇಕರ್ ನೂತನ ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:47 IST
Last Updated 7 ಜನವರಿ 2026, 6:47 IST
<div class="paragraphs"><p>ಸುಮನ್‌ ಪನ್ನೇಕರ್, ಪಿ.ಎಸ್‌ ಹರ್ಷ</p></div>

ಸುಮನ್‌ ಪನ್ನೇಕರ್, ಪಿ.ಎಸ್‌ ಹರ್ಷ

   

ಬಳ್ಳಾರಿ: ಬಳ್ಳಾರಿಯಲ್ಲಿ ಹೊಸ ವರ್ಷದ ದಿನ ಜರುಗಿದ ಘರ್ಷಣೆಯ ಬೆನ್ನಿಗೇ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಇಬ್ಬರು ಉನ್ನತ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು,  ಹೊಸಬರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. 

ಬಳ್ಳಾರಿ ವಲಯಕ್ಕೆ 2004ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಪಿ.ಎಸ್‌ ಹರ್ಷ ಅವರನ್ನು ಹೊಸ ವಲಯ ಪೊಲೀಸ್ ಮಹಾನಿರೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಈ ಹುದ್ದೆಯಲ್ಲಿದ್ದ ವರ್ತಿಕಾ ಕಟಿಯಾರ್‌ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ. 

ADVERTISEMENT

ಬೆಂಗಳೂರಿನ ಗುಪ್ತವಾರ್ತೆ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಮನ್‌ ಪನ್ನೇಕರ್ ಅವರನ್ನು ಬಳ್ಳಾರಿಯ ಹೊಸ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನಿಯೋಜಿಸಲಾಗಿದೆ. ಡಿ. 31ರಂದು ಹೊಸದಾಗಿ ಎಸ್‌ಪಿಯಾಗಿದ್ದ ಪವನ್‌ ನಿಜ್ಜೂರ್‌ ಅವರನ್ನು ಘರ್ಷಣೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. 

ಚಿತ್ರದುರ್ಗದ ಎಸ್‌ಪಿ ರಂಜಿತ್‌ ಬಂಡಾರು ಅವರನ್ನು ಉಸ್ತುವಾರಿ ಎಸ್‌ಪಿಯಾಗಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.