ADVERTISEMENT

ಬಳ್ಳಾರಿ: ವರ್ಷದ ಹಿಂದೆ ಮಾರಾಟವಾಗಿದ್ದ ಮಗು ಆಂಧ್ರದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
<div class="paragraphs"><p>ಮಗು (ಪ್ರಾತಿನಿಧಿಕ ಚಿತ್ರ)</p></div>

ಮಗು (ಪ್ರಾತಿನಿಧಿಕ ಚಿತ್ರ)

   

ಬಳ್ಳಾರಿ: ಕಳೆದ ವರ್ಷ ಫೆಬ್ರುವರಿಯಲ್ಲಿ ತಾಯಿಯಿಂದಲೇ ₹ 60 ಸಾವಿರಕ್ಕೆ ಮಾರಾಟವಾಗಿದ್ದ 14 ದಿನಗಳ ಗಂಡು ಮಗುವನ್ನು ರಕ್ಷಿಸಿರುವ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು, ಆಂಧ್ರ ಪ್ರದೇಶದ ಆಲೂರಿನಿಂದ ಕರೆ ತಂದಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಖರೀದಿಸಿದ ನವೀನ್‌ಕುಮಾರ್ ಮತ್ತು ಮಗುವಿನ ತಾಯಿಯನ್ನು ಬಂಧಿಸಲಾಗಿದೆ. ಮಗುವನ್ನು ಸದ್ಯ ತಾಯಿ ಬಳಿಯೇ ಇರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಮಹಿಳೆಯು 2024ರ ಫೆಬ್ರುವರಿಯಲ್ಲಿ ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾಲೇಜಿನಲ್ಲಿ (ವಿಮ್ಸ್‌) ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅದೇ ತಿಂಗಳ 20ರಂದು 14 ದಿನಗಳ ಮಗುವನ್ನು ಬೇರೊಬ್ಬರಿಗೆ ಮಾರಿದ  ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿಗೆ 2024ರ ಆಗಸ್ಟ್ 5ರಂದು ಅನಾಮಧೇಯ ಕರೆ ಬಂದಿತ್ತು. ಕರೆ ಆಧರಿಸಿ ಅಧಿಕಾರಿಗಳು ಪರಿಶೀಲಿಸಿದಾಗ, ಮಗು ಮಾರಾಟವಾಗಿರುವುದು ಖಚಿತವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡೆವು’ ಎಂದು ಅವರು ತಿಳಿಸಿದ್ದಾರೆ.

‘ನವೀನ್‌ಕುಮಾರ್ ವೃತ್ತಿಯ ಭಾಗವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಡಾಡುತ್ತಿದ್ದ. ಹೀಗಾಗಿ ಆತನನ್ನು ಪತ್ತೆ ಮಾಡುವುದು ವಿಳಂಬವಾಗಿತ್ತು. ಅನಿವಾರ್ಯ ಕಾರಣಗಳಿಂದ ಮಹಿಳೆಗೆ ಮಗು ಬೇಕಿರಲಿಲ್ಲ. ಮಕ್ಕಳಿರದ ಕಾರಣ ಆತ ಮಗುವನ್ನು ಖರೀದಿಸಿದ್ದ’ ಎಂದು ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.