ಬಳ್ಳಾರಿ: ತಾಲ್ಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಮನೆಯಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಪಾರ್ವತಮ್ಮ (55) ಮತ್ತು ಅವರ ಮಗಳು, ಹುಲಿಗೆಮ್ಮ (35) ಸ್ಥಳದಲ್ಲೇ ಜೀವಂತ ದಹನಗೊಂಡರು.
ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ ಬಳಿಕ ಗ್ರಾಮೀಣ ಪೊಲೀಸರು ಸುಟ್ಟುಕರಕಲಾದ ಮೃತ ದೇಹಗಳನ್ನು ಅಡುಗೆ ಕೋಣೆಯಿಂದ ಹೊರಕ್ಕೆ ಸಾಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.