ಹಗರಿಬೊಮ್ಮನಹಳ್ಳಿಯ ಬೇವಿನ ಮರವೊಂದಕ್ಕೆ ನೇತುಹಾಕಿದ ಕುರಿಮರಿಯನ್ನು ನಾಯಿಯೊಂದು ತಿನ್ನುತ್ತಿರುವುದು
ಹಗರಿಬೊಮ್ಮನಹಳ್ಳಿ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಳಿ ರಾಘವೇಂದ್ರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಪಕ್ಕದ ಬೇವಿನ ಮರವೊಂದಕ್ಕೆ ಸತ್ತ ಕುರಿಮರಿಯೊಂದನ್ನು ನೇತು ಹಾಕಲಾಗಿದೆ.
ದಿಢೀರ್ ಕಾಣಿಸಿಕೊಂಡ ರೋಗದಿಂದ ಮೃತಪಟ್ಟ ಕುರಿಮರಿಯನ್ನು ನೇತು ಹಾಕಿರುವುದು ಬುಧವಾರ ಆತಂಕಕ್ಕೆ ಕಾರಣವಾಗಿದೆ.
ಕುರಿಗಳು ಮೈಲಿರೋಗಕ್ಕೆ ತುತ್ತಾದರೆ ಅವುಗಳನ್ನು ಮರಗಳಿಗೆ ನೇತುಹಾಕಲಾಗುತ್ತದೆ. ರಸ್ತೆಯಲ್ಲಿ ನಡೆದಾಡುವ ಜನರ ದೃಷ್ಟಿ ಸತ್ತ ನೇತಾಡುವ ಕುರಿ ಮೇಲೆ ಬಿದ್ದರೆ ಬಂದಿರುವ ರೋಗ ಇತರೆ ಕುರಿಗಳಿಗೆ ತಟ್ಟದು ಎನ್ನುವ ನಂಬಿಕೆ ಇವರದ್ದಾಗಿದೆ.
ಆದರೆ ಇಲ್ಲಿ ಆಗಿದ್ದೇ ಬೇರೆ. ನೇತು ಹಾಕಿದ ಕುರಿಮರಿಯನ್ನು ಬೀದಿ ನಾಯಿಗಳು ತಿಂದು ಹಾಕಿದವು, ನಾಯಿಗಳಿಗೆ ರೋಗ ತಗುಲಿದರೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಮೈಲಿರೋಗ ಇರುವ ಯಾವುದೇ ಪ್ರಕರಣಗಳು ಇದುವರೆಗೂ ಕಂಡುಬಂದಿಲ್ಲ. ನೇತು ಹಾಕುವುದರಿಂದ ರೋಗಗಳು ವಾಸಿಯಾಗುವುದಿಲ್ಲ. ಸರಿಯಾದ ಸಮಯದಲ್ಲಿ ಲಸಿಕೆ ನೀಡಬೇಕು ಸತ್ತ ಕುರಿಗಳನ್ನು ಸ್ಥಳದಲ್ಲಿಯೇ ಹೂತು ಹಾಕಬೇಕು.ಡಾ.ಸೂರಪ್ಪ ಪಶುವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.