
ಮರಿಯಮ್ಮನಹಳ್ಳಿಯಲ್ಲಿ ಶುಕ್ರವಾರ ನಡೆದ ನಾಣಿಕೇರಿ ಉತ್ಸವವನ್ನು ಸಾಹಿತಿ ಬಿ. ಅಂಬಣ್ಣ ಉದ್ಘಾಟಿಸಿದರು
ಮರಿಯಮ್ಮನಹಳ್ಳಿ: ‘ಯುವಪೀಳಿಗೆಗೆ ಇತಿಹಾಸ, ಸಂಸ್ಕೃತಿ ಬಗ್ಗೆ ತಿಳಿಸಿಕೊಡಬೇಕು’ ಎಂದು ಸಾಹಿತಿ ಬಿ. ಅಂಬಣ್ಣ ಹೇಳಿದರು.
ಪಟ್ಟಣದ ಶಾಲೆ ಆವರಣದಲ್ಲಿ ನಾಣಿಕೇರಿ ಯುವ ಸೇವಾ ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡಿದ್ದ ಮೂರು ದಿನಗಳ ನಾಣಿಕೇರಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
‘ತುಂಗಭದ್ರ ಜಲಾಶಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದರೂ ನಾರಾಯಣದೇವರಕೆರೆಯ ಜನರು ಕಲೆ, ಸಾಹಿತ್ಯ, ಸಂಸ್ಕೃತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗ್ರಾಮದ ಲಕ್ಷ್ಮಿಬಾಯಿ ಎಂಬುವರು ಸಿನಿಮಾ ನಟಿಯಾಗಿದ್ದರು. ಮೊದಲ ಗಗನಸಖಿಯೂ ಇದೇ ಗ್ರಾಮದವರು’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಿವಮೂರ್ತಿ, ಸಿ. ಸತೀಶ್, ಎಸ್. ಕೃಷ್ಣಾನಾಯ್ಕ, ಕಿಚಡಿ ಕೊಟ್ರೇಶ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎ. ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆದಿಮನಿ ಹುಸೇನ್‍ಬಾಷಾ, ಉಪಾಧ್ಯಕ್ಷೆ ಆರ್. ಲಕ್ಷ್ಮಿ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷೆ ಎಲ್. ಹುಲಗಿಬಾಯಿ ರುದ್ರೇಶ್ ನಾಯ್ಕ, ಮುಖಂಡರಾದ ಎಲ್. ಪರಮೇಶ್ವರಪ್ಪ, ಗೋವಿಂದರ ಪರಶುರಾಮ, ಪ್ರಕಾಶ್ ಪೂಜಾರ್, ವಸ್ತ್ರದ ಶಿವಶಂಕರಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.