ADVERTISEMENT

‘20 ಹಳ್ಳಿಯಲ್ಲಿ ಸರ್ಕಾರದ ಯೋಜನೆ ಜಾಗೃತಿ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 14:53 IST
Last Updated 18 ಜನವರಿ 2021, 14:53 IST

ಹೊಸಪೇಟೆ: ‘ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಲು ತಾಲ್ಲೂಕಿನ 20 ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಾಲ್ಲೂಕಿನಾದ್ಯಂತ ಬೀದಿ ನಾಟಕ, ಜಾನಪದ ಕಲೆಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರಿವು, ಕೋವಿಡ್‌–19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹಮ್ಮಿಕೊಂಡಿರುವ ಜಾಗೃತಿ ಜಾಥಾಕ್ಕೆ ಸೋಮವಾರ ನಗರದಲ್ಲಿ ಚಾಲನೆ ನೀಡಿ ಮಾತನಾಡಿದರು.

‘ಸರ್ಕಾರದ ಯೋಜನೆಗಳ ಲಾಭ ನೈಜ ಫಲಾನುಭವಿಗಳಿಗೆ ಸಿಗಬೇಕು. ಆ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ತಾಲ್ಲೂಕಿನ ಚಿಲಕನಹಟ್ಟಿ, ತಿಮ್ಮಲಾಪುರ, ಗಾದಿಗನೂರು, ಭುವನಹಳ್ಳಿ, ವೆಂಕಟಾಪುರ, ಬುಕ್ಕಸಾಗರ, ನಲ್ಲಾಪುರ, ಮೆಟ್ರಿ, ಕಲ್ಲಹಳ್ಳಿ, ಹಂಪಿ, ಗರಗ, ಬ್ಯಾಲಕುಂದಿ, ರಾಮಸಾಗರ, ಸೀತಾರಾಮ ತಾಂಡಾ, ಹನುಮನಹಳ್ಳಿ, ಪೋತಲಕಟ್ಟೆ, ಗುಂಡ್ಲವದ್ದಿಗೇರಿ, ಧರ್ಮಸಾಗರ, ತಾಳೆಬಸಾಪುರ, ಜಿ.ನಾಗಲಾಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್‌, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಸ್ತ್ರೀ ರಂಗದಲ್ಲಿ ಅಂತರಂಗ ಕಲಾ ಟ್ರಸ್ಟ್‌ ಅಧ್ಯಕ್ಷೆ ಯರಿಯಮ್ಮ, ಅಕ್ಷಯ ಕಲಾ ಟ್ರಸ್ಟ್ ಅಧ್ಯಕ್ಷ ಸುಕ್ಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.