ADVERTISEMENT

ಬಳ್ಳಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 12:38 IST
Last Updated 2 ಸೆಪ್ಟೆಂಬರ್ 2020, 12:38 IST
ಹೊಸಪೇಟೆ ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)
ಹೊಸಪೇಟೆ ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)   

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಉತ್ತಮ ಮಳೆಯಾಗಿದೆ.

ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮಧ್ಯಾಹ್ನ 3ಕ್ಕೆ ಆರಂಭಗೊಂಡ ಬಿರುಸಿನ ಮಳೆ ಸತತ ಒಂದು ಗಂಟೆ ಸುರಿಯಿತು. ಬಳಿಕ ಸಂಜೆಯ ವರೆಗೆ ಜಿಟಿಜಿಟಿ ಮಳೆ ಮುಂದುವರಿದಿತ್ತು.

ತಾಲ್ಲೂಕಿನ ಮರಿಯಮ್ಮನಹಳ್ಳಿ, ಕೊಂಡನಾಯಕನಹಳ್ಳಿ, ಹೊಸೂರು, ವ್ಯಾಸನಕೆರೆ, ವಡ್ಡರಹಳ್ಳಿ, ಸಂಕ್ಲಾಪುರ, ಮಲಪನಗುಡಿ, ಹಂಪಿ, ಕಮಲಾಪುರ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ದಟ್ಟ ಕಾರ್ಮೋಡಗಳು ದಟ್ಟೈಸಿಕೊಂಡು ವರ್ಷಧಾರೆಯಾಯಿತು.

ADVERTISEMENT

ಜಿಲ್ಲೆಯ ಸಂಡೂರು, ಕೊಟ್ಟೂರು, ಕೂಡ್ಲಿಗಿ, ಹೂವಿನಹಡಗಲಿ, ತೋರಣಗಲ್ಲು, ಕುಡಿತಿನಿ, ಕಾನಹೊಸಹಳ್ಳಿಯಲ್ಲಿಯೂ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.