ADVERTISEMENT

ಪಿಎಫ್‌ಐ ಸಂಘಟನೆ ನನ್ನ ಹತ್ಯೆಗೂ ಸಂಚು ರೂಪಿಸಿತ್ತು: ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 9:24 IST
Last Updated 14 ಏಪ್ರಿಲ್ 2023, 9:24 IST
ಬಳ್ಳಾರಿ ನಗರದ ಸಣ್ಣ ತರಕಾರಿ ಮಾರುಕಟ್ಟೆಯಲ್ಲಿರುವ ಮನೆ ದೇವರು ಚೌಡೇಶ್ವರಿ ದೇವಿಗೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌. ಈಶ್ವರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಶುಕ್ರವಾರ ಪೂಜೆ ಸಲ್ಲಿಸಿದರು.
ಬಳ್ಳಾರಿ ನಗರದ ಸಣ್ಣ ತರಕಾರಿ ಮಾರುಕಟ್ಟೆಯಲ್ಲಿರುವ ಮನೆ ದೇವರು ಚೌಡೇಶ್ವರಿ ದೇವಿಗೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌. ಈಶ್ವರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಶುಕ್ರವಾರ ಪೂಜೆ ಸಲ್ಲಿಸಿದರು.   

ಬಳ್ಳಾರಿ: ‘ಪಿಎಫ್‌ಐ ಸಂಘಟನೆ ನನ್ನ ಹತ್ಯೆಗೂ ಸಂಚು ರೂಪಿಸಿತ್ತು’ ಎಂದು ಹಿರಿಯ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಳ್ಳಾರಿ ನಗರದಲ್ಲಿರುವ ಮನೆ ದೇವರು ಚೌಡೇಶ್ವರಿ ದೇವಾಲಯಕ್ಕೆ ಕುಟುಂಬ ಸಮೇತ ಬಂದಿದ್ದ ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ನನ್ನ ಕೊಲೆಗೆ ಪಿಎಫ್‌ಐ ಸ್ಕೆಚ್‌ ಹಾಕಿದ್ದು ಹಿಂಡಲಗಾ ಜೈಲಿನಲ್ಲಿರುವ ಶಾಹಿರ್ ಶೇಖ್ ವಿಚಾರಣೆಯಿಂದ ಬಹಿರಂಗವಾಗಿದೆ. ಆರೋಪಿ ನಾಗ್ಪುರ ಪೊಲೀಸರ ಕಸ್ಟಡಿಯಲ್ಲಿದ್ದಾನೆ’ ಎಂದು ಈಶ್ವರಪ್ಪ ಹೇಳಿದರು.

ADVERTISEMENT

‘ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿರುವೆ. ಹಿಂದೆ ಕೂಡ ನನಗೆ ಹಿಂದುತ್ವ ವಿಚಾರದಲ್ಲಿ ಕೊಲೆ ಬೆದರಿಕೆ ಬಂದಿತ್ತು. ಆಗಿನ ಕಾಂಗ್ರೆಸ್ ಸರ್ಕಾರ ಭದ್ರತೆ ಒದಗಿಸಿತ್ತು. ಇಂಥ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.