ADVERTISEMENT

ಗೃಹರಕ್ಷಕ ದಳದ ಗಿರೀಶ್‌ಗೆ ರಾಷ್ಟ್ರಪತಿ ಪದಕ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 12:06 IST
Last Updated 26 ಜನವರಿ 2019, 12:06 IST
ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಹೊಸಪೇಟೆ ತಾಲ್ಲೂಕು ಗೃಹರಕ್ಷಕ ದಳದ ಘಟಕಾಧಿಕಾರಿ ಎಸ್‌.ಎಂ. ಗಿರೀಶ್‌ ಅವರನ್ನು ಗೃಹರಕ್ಷಕ ದಳದ ಮಹಾನಿರೀಕ್ಷಕ ಎಂ.ಎನ್‌. ರೆಡ್ಡಿ ಅವರು ಭಾನುವಾರ ಬೆಂಗಳೂರಿನಲ್ಲಿ ಗೌರವಿಸಿದರು
ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಹೊಸಪೇಟೆ ತಾಲ್ಲೂಕು ಗೃಹರಕ್ಷಕ ದಳದ ಘಟಕಾಧಿಕಾರಿ ಎಸ್‌.ಎಂ. ಗಿರೀಶ್‌ ಅವರನ್ನು ಗೃಹರಕ್ಷಕ ದಳದ ಮಹಾನಿರೀಕ್ಷಕ ಎಂ.ಎನ್‌. ರೆಡ್ಡಿ ಅವರು ಭಾನುವಾರ ಬೆಂಗಳೂರಿನಲ್ಲಿ ಗೌರವಿಸಿದರು   

ಹೊಸಪೇಟೆ: ತಾಲ್ಲೂಕು ಗೃಹರಕ್ಷಕ ದಳದ ಘಟಕಾಧಿಕಾರಿ ಎಸ್‌.ಎಂ. ಗಿರೀಶ್‌ ಅವರು 2018–19ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

2009ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಪಾತ್ರರಾಗಿದ್ದರು. ಜನಜಾಗೃತಿ ಕಾರ್ಯಕ್ರಮ, ಅಗತ್ಯ ಸಂದರ್ಭಗಳಲ್ಲಿ ಭದ್ರತೆ ಸೇರಿದಂತೆ ಇತರೆ ಉತ್ತಮ ಕೆಲಸವನ್ನು ಪರಿಗಣಿಸಿ ಅವರಿಗೆ ರಾಷ್ಟ್ರಪತಿ ಪದಕ್ಕೆ ಆಯ್ಕೆ ಮಾಡಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಮಹಾನಿರೀಕ್ಷಕ ಎಂ.ಎನ್‌. ರೆಡ್ಡಿ ಅವರು ಗಿರೀಶ್‌ ಅವರನ್ನು ಸನ್ಮಾನಿಸಿದರು.

ಗಿರೀಶ್‌ ಅವರಿಗೆ ಪದಕ ಬಂದಿರುವುದಕ್ಕೆ ಗೃಹರಕ್ಷಕ ದಳದ ಘಟಕಾಧಿಕಾರಿ ಎಲ್‌. ವಾಲ್ಯಾ ನಾಯ್ಕ, ಗೃಹರಕ್ಷಕರಾದ ಎಸ್‌. ಹನುಮಂತಪ್ಪ, ಎಂ.ವಿ. ಮಂಜುನಾಥ, ಪಿ. ಕೊಟ್ರಪ್ಪ, ಎನ್‌. ಓಂಕಾರೇಶ್ವರ, ಎಚ್‌.ಬಿ. ದುರುಗಪ್ಪ, ಬಿ. ಪಾಂಡುರಂಗ, ಅಜ್ಜಯ್ಯ, ಬಿ. ಹುಸೇನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.