ADVERTISEMENT

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಹಾಡಿಗೆ ಹುಚ್ಚೆದ್ದು ಕುಣಿದ ಜನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 10:24 IST
Last Updated 3 ಮಾರ್ಚ್ 2019, 10:24 IST
ರಾಜೇಶ್‌ ಕೃಷ್ಣನ್‌
ರಾಜೇಶ್‌ ಕೃಷ್ಣನ್‌   

ಹೊಸಪೇಟೆ: ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ.. ಹಂಪಿಯ ಗುಡಿ..’ ಸಾಲುಗಳು ಕೇಳಿಸುತ್ತಿದ್ದಂತೆ ಅಲ್ಲಿ ಹರ್ಷೋದ್ಘಾರ, ಕೇಕೆ, ಕರತಾಡನ ಮುಗಿಲು ಮುಟ್ಟಿತ್ತು. ಸ್ಥಳದಲ್ಲೇ ಜನ ಹುಚ್ಚೆದ್ದು ಕುಣಿದರು.

ಹಂಪಿ ಉತ್ಸವದ ಪ್ರಯುಕ್ತ ಶನಿವಾರ ರಾತ್ರಿ ಎದುರು ಬಸವಣ್ಣ ಮಂಟಪ ವೇದಿಕೆಯಲ್ಲಿ ಗಾಯಕ ರಾಜೇಶ್‌ ಕೃಷ್ಣನ್‌ ತಂಡವು ಈ ಮೇಲಿನ ಗೀತೆಯೊಂದಿಗೆ ರಸಮಂಜರಿ ಕಾರ್ಯಕ್ರಮ ಆರಂಭಿಸಿದಾಗ ಕಂಡು ಬಂದ ದೃಶ್ಯಗಳಿವು.

ಗಾಯಕಿ ಶಮಿತಾ ಮಲ್ನಾಡ್, ಅನುರಾಧಾ ಭಟ್ ಹಾಡಿದ ಈ ಹಾಡಿಗೆ ಜನ ನಿಂತಲ್ಲೇ ಹೆಜ್ಜೆ ಹಾಕಿದರು. ಮೂರುವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಂಗೀತ ರಸಮಂಜರಿಯನ್ನು ಜನ ಕೊನೆಯ ವರೆಗೂ ಉತ್ಸಾಹದಿಂದ ಕಣ್ತುಂಬಿಕೊಂಡರು.

ADVERTISEMENT

‌ನಂತರ ವಿದ್ಯುದ್ದೀಪಗಳಿಂದ ಝಗಮಗಿಸುತ್ತಿದ್ದ ವೇದಿಕೆ ಮೇಲೆ ರಾಜೇಶ್‌ ಕೃಷ್ಣನ್‌ ಬಂದರು. ಆಗ ಸಭಿಕರ ಸಂಭ್ರಮ ಮೇರೆ ಮೀರಿತ್ತು. ಸಿ.ಬಿ.ಐ. ಶಂಕರ್ ಸಿನಿಮಾದ ‘ಗೀತಾಂಜಲಿ..’ ಹಾಡು ಹಾಡುತ್ತಿದ್ದಂತೆ ಜನ ಹೋ ಎಂದು ಜನ ಕಿರುಚಿದರು.

’ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ’, ’ಹೊಂಬಾಳೆ.. ಹೊಂಬಾಳೆ, ಪ್ರೀತಿಯ ಹೊಂಬಾಳೆ’, ’ಉಸಿರೇ ಉಸಿರೇ, ಈ ಉಸಿರ ಕೊಲ್ಲಬೇಡ’ ಮೂರು ಹಾಡುಗಳನ್ನು ಸಾಲಾಗಿ ರಾಜೇಶ್‌ ಹಾಡಿದರು. ಗಾಯಕಿ ಅನುರಾಧಾ ಭಟ್ ಅವರು ‘ಅಪ್ಪಾ.. ಐ ಲವ್ ಯು ಅಪ್ಪಾ..’, ಶಮಿತಾ ಮಲ್ನಾಡ್ ಅವರ ‘ಏ ಹುಡ್ಗಿ ಯಾಕಿಂಗ್ ಆಡ್ತೀ, ಮಾತಲ್ಲೇ ಮೋಡಿ ಮಾಡ್ತೀ’ ಎಂಬ ಹಾಡಿಗೆ ಜನ ತಲೆದೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.