ADVERTISEMENT

ಸಿರುಗುಪ್ಪ | ತ.ನಾಡಿನ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಕಾರು ಅಪಘಾತ: 3 ಸಾವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:01 IST
Last Updated 24 ಡಿಸೆಂಬರ್ 2025, 4:01 IST
<div class="paragraphs"><p>ಸಿರುಗುಪ್ಪದಲ್ಲಿ ಕಾರು ಅಪಘಾತ</p></div>

ಸಿರುಗುಪ್ಪದಲ್ಲಿ ಕಾರು ಅಪಘಾತ

   

ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಪಟ್ಟಣದ 20ನೇ ವಾರ್ಡಿನ ದೇವಿನಗರ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ ಬುಧವಾರ ಮುಂಜಾನೆ ಕಾರೊಂದು ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ನಿಟ್ಟೂರಿನ ಪ್ರಸಾದ್ ರಾವ್ (75) ಸಿರುಗುಪ್ಪ ನಿವಾಸಿಗಳಾದ ವಿಜಯ (70) ಹಾಗೂ ಸಂಧ್ಯಾ (35) ಎಂದು ಗುರುತಿಸಲಾಗಿದೆ.

ADVERTISEMENT

ತೀವ್ರವಾಗಿ ಗಾಯಗೊಂಡ ನಿಟ್ಟೂರು ಗ್ರಾಮದ ಪದ್ಮ (70) ಹಾಗೂ ಸಿರುಗುಪ್ಪದ ಬ್ರಹೇಶ್ವರರಾವ್ (45) ಇವರನ್ನು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.

ನಿಟ್ಟೂರು ಗ್ರಾಮದವರಾದ, ಸದ್ಯ ಸಿರುಗುಪ್ಪ ನಗರದಲ್ಲಿ ವಾಸವಾಗಿರುವ ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ಸು ಬರುವಾಗ ದೇವಿನಗರದ ಬಳಿ ಅಪಘಾತವಾಗಿದೆ.

ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ, ಈ ಅವಘಢ ಸಂಭವಿಸಿದೆ ಎಂದು ಹೇಳಲಾಗಿದೆ.

ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿರುಗುಪ್ಪದಲ್ಲಿ ಕಾರು ಅಪಘಾತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.