ADVERTISEMENT

ಬಳ್ಳಾರಿ | ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯ ಕೋಳಿಗಳ ವಧೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:21 IST
Last Updated 6 ಮಾರ್ಚ್ 2025, 15:21 IST
ಕೋಳಿ
ಕೋಳಿ   

ಬಳ್ಳಾರಿ: ಕೋಳಿಗಳ ಸಾಮೂಹಿಕ ಸಾವು ಸಂಭವಿಸಿದ್ದ ಕಪ್ಪಗಲ್ಲಿನ ಕೋಳಿ ಫಾರಂನಿಂದ ಒಂದು ಕಿ.ಮೀ ಸುತ್ತಲ ಪ್ರದೇಶದಲ್ಲಿದ್ದ ಎಲ್ಲ ಕೋಳಿಗಳನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ವಧೆ ಮಾಡಿದ್ದಾರೆ. 

‘ಕೋಳಿ ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ 305 ಹಿತ್ತಲ (ನಾಟಿ)ಕೋಳಿಗಳು ಮತ್ತು ಫಾರಂನಲ್ಲಿ 1,000 ಬ್ರಾಯ್ಲರ್‌ ಕೋಳಿಗಳಿದ್ದವು. ಬಹುತೇಕ ಕೋಳಿಗಳನ್ನು ಬುಧವಾರವೇ ವಧೆ ಮಾಡಲಾಯಿತು. ಅಳಿದುಳಿದ ಕೋಳಿಗಳನ್ನು ಗುರುವಾರ ವಧಿಸಲಾಗಿದೆ’ ಎಂದು ಇಲಾಖೆಯ ಉಪ ನಿರ್ದೇಶಕ ಹನುಮಂತ ನಾಯ್ಕ ಕಾರಬಾರಿ ಪ್ರಜಾವಾಣಿಗೆ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಬೇರೆಲ್ಲಿಯೂ ಸದ್ಯ ಹಕ್ಕಿ ಜ್ವರದ ಯಾವುದೇ ಪ್ರಕರಣಗಳೂ ಪತ್ತೆಯಾಗಿಲ್ಲ ಎಂದೂ ಕಾರಬಾರಿ ಅವರು ತಿಳಿಸಿದ್ದಾರೆ. 

ADVERTISEMENT

ಕಪ್ಪಗಲ್ಲಿನ ಕೋಳಿ ಫಾರಂನಲ್ಲಿ 8,000 ಕೋಳಿಗಳ ಸಾವಿಗೀಡಾಗಲು ಹಕ್ಕಿ ಜ್ವರವೇ ಕಾರಣ ಎಂಬುದು ಪರೀಕ್ಷಾ ವರದಿಯಿಂದ ಗೊತ್ತಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.