ADVERTISEMENT

ಪಕ್ಷಿಗಳ ದಾಹ ತಣಿಸುವ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 12:34 IST
Last Updated 8 ಏಪ್ರಿಲ್ 2019, 12:34 IST
ಮರಕ್ಕೆ ನೇತು ಹಾಕಿರುವ ಮಡಿಕೆಗೆ ನೀರು ಹಾಕುತ್ತಿರುವ ವಿದ್ಯಾರ್ಥಿಗಳು
ಮರಕ್ಕೆ ನೇತು ಹಾಕಿರುವ ಮಡಿಕೆಗೆ ನೀರು ಹಾಕುತ್ತಿರುವ ವಿದ್ಯಾರ್ಥಿಗಳು   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಪಕ್ಷಿಗಳ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ವಿ.ವಿ. ಪರಿಸರದಲ್ಲಿರುವ ಮರಗಳಿಗೆ ತಟ್ಟೆಯಾಕಾರದ ಮಣ್ಣಿನ ಮಡಿಕೆಗಳನ್ನು ನೇತು ಹಾಕಿ, ನಿತ್ಯ ಅವುಗಳಲ್ಲಿ ನೀರು ಹಾಕುತ್ತಿದ್ದಾರೆ. ವಿ.ವಿ. ಆವರಣದಲ್ಲಿ ನೆಲೆಸಿರುವ ವಿವಿಧ ಜಾತಿಯ ಪಕ್ಷಿಗಳು ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿವೆ.

ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಬಿಡುವು ಸಿಕ್ಕಾಗ ಮಡಿಕೆಗಳಲ್ಲಿ ನೀರು ಹಾಕುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ಬೇಸಿಗೆಯಲ್ಲಿ ಬಹುತೇಕ ಜಲಮೂಲಗಳು ಬತ್ತಿ ಹೋಗಿರುವುದರಿಂದ ಹನಿ ನೀರಿಗಾಗಿ ಪಕ್ಷಿಗಳು ಪರದಾಟ ನಡೆಸುವಂತಹ ಪರಿಸ್ಥಿತಿ ಇದೆ. ಇದನ್ನು ಮನಗಂಡು ಕೆಲವು ಮರಗಳಲ್ಲಿ ಮಡಿಕೆಗಳನ್ನು ನೇತು ಹಾಕಿ ನೀರು ಹಾಕುತ್ತಿದ್ದೇವೆ. ಪಕ್ಷಿಗಳು ಬಂದು ನೀರು ಕುಡಿದು ಹೋಗುತ್ತಿವೆ. ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದು ಇಲ್ಲ ಎಂದು ಭಾವಿಸಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಶೋಧನಾ ವಿದ್ಯಾರ್ಥಿ ಗಿರೀಶ್‌ ಕುಮಾರ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.