
ತೆಕ್ಕಲಕೋಟೆ: ಪಟ್ಟಣದ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಹೋಮ, ಅರ್ಚನೆ ಮತ್ತು ಅಭಿಷೇಕ ಪೂಜೆ ನಡೆಯಿತು. ನಂತರ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.
ಸಂಜೆ ಧರ್ಮಕರ್ತ ಪಿ. ಎಂ ಜ್ಞಾನಾನಂದ ಸ್ವಾಮಿ ಅವರ ಮನೆಯಿಂದ ಡೊಳ್ಳು, ಕಳಸ ಸಕಲ ವಾದ್ಯ ಮೇಳ ಹಾಗೂ ಮಹಿಳೆಯರ ಕುಂಭದೊಂದಿಗೆ ಸಿದ್ಧರಾಮೇಶ್ವರರ ಮೂರ್ತಿಯ ದೇವಸ್ಥಾನದವರೆಗೆ ‘ನಂದಿಕೋಲು’ ಹಾಗೂ ದೇವರ ಮೂರ್ತಿಗಳ ಮೆರವಣಿಗೆ ನಡೆಯಿತು.
ನಂತರ ದೇವಸ್ಥಾನದಿಂದ ಮೂರ್ತಿಯನ್ನು ಜಡೆ ಶಂಕರಲಿಂಗ ದೇವಸ್ಥಾನದ ಬಳಿ ಮೆರವಣಿಗೆ ಮೂಲಕ ತಂದು ರಥದಲ್ಲಿ ಕುಳ್ಳಿರಿಸಿ ಪ್ರತಿಷ್ಠಾಪಿಸಲಾಯಿತು. ಭಾರೀ ಗಾತ್ರದ ಹೂಗಳು ಮತ್ತು ಹಸಿರು ತೋರಣಗಳಿಂದ ಅಲಂಕರಿಸಿದ ಭವ್ಯ ರಥಕ್ಕೆ ಸ್ವಾಮಿಜೀ ತೆಂಗಿನ ಕಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಿದ್ಧರಾಮೇಶ್ವರ ಮಠದ ಸಮಸ್ತ ಸದ್ಭಕ್ತ ಮಂಡಳಿ ಸೇರಿದಂತೆ ಜಾತ್ರೆಗೆ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿ ಹರಕೆ ತೀರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.