ADVERTISEMENT

ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 8:57 IST
Last Updated 29 ಜುಲೈ 2022, 8:57 IST
ರೈಲ್ವೆ ಇಲಾಖೆಯು ಹಿರಿಯ ನಾಗರಿಕರಿಗೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಪುನರ್‌ ಆರಂಭಿಸಬೇಕೆಂದು ಆಗ್ರಹಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಹಾಗೂ ಹಿರಿಯ ನಾಗರಿಕರ ವೇದಿಕೆಯವರು ಗುರುವಾರ ಹೊಸಪೇಟೆ ರೈಲು ನಿಲ್ದಾಣದ ಎದುರು ಟ್ವಿಟರ್‌ ಅಭಿಯಾನ ನಡೆಸಿದರು
ರೈಲ್ವೆ ಇಲಾಖೆಯು ಹಿರಿಯ ನಾಗರಿಕರಿಗೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಪುನರ್‌ ಆರಂಭಿಸಬೇಕೆಂದು ಆಗ್ರಹಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಹಾಗೂ ಹಿರಿಯ ನಾಗರಿಕರ ವೇದಿಕೆಯವರು ಗುರುವಾರ ಹೊಸಪೇಟೆ ರೈಲು ನಿಲ್ದಾಣದ ಎದುರು ಟ್ವಿಟರ್‌ ಅಭಿಯಾನ ನಡೆಸಿದರು   

ಹೊಸಪೇಟೆ (ವಿಜಯನಗರ): ರೈಲ್ವೆ ಇಲಾಖೆಯು ಈ ಹಿಂದಿನಂತೆ ಹಿರಿಯ ನಾಗರಿಕರಿಗೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಪುನರ್‌ ಆರಂಭಿಸಬೇಕೆಂದು ಆಗ್ರಹಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಹಾಗೂ ಹಿರಿಯ ನಾಗರಿಕರ ವೇದಿಕೆಯವರು ಗುರುವಾರ ನಗರದ ರೈಲು ನಿಲ್ದಾಣದ ಎದುರು ಟ್ವಿಟರ್‌ ಅಭಿಯಾನ ನಡೆಸಿದರು.

ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ರೈತಹ ಬಳಕೆದಾರರು ಸಾಮೂಹಿಕವಾಗಿ ನಡೆಸಿದ ಟ್ವಿಟರ್‌ ಅಭಿಯಾನವನ್ನು ಬೆಂಬಲಿಸಿ ನಗರದಲ್ಲೂ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ವಿಜಯನಗರ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಕೋವಿಡ್‌ ಕಾರಣಕ್ಕಾಗಿ 2020ರಲ್ಲಿ ರೈಲ್ವೆ ರಿಯಾಯಿತಿ ಸೌಲಭ್ಯ ರದ್ದುಪಡಿಸಿತ್ತು. ಕೋವಿಡ್‌ ನಂತರ ಹಿರಿಯ ನಾಗರಿಕರು ಒಳಗೊಂಡಂತೆ ಸಮಾಜದ ಎಲ್ಲ ವರ್ಗಗಳ ಜನರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ರಿಯಾಯಿತಿ ಸೌಲಭ್ಯ ರದ್ದುಗೊಳಿಸಿರುವುದು ಸರಿಯಲ್ಲ. ಕೂಡಲೇ ಆ ಸೌಲಭ್ಯ ಮರು ಆರಂಭಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಿರಿಯರು ಜ್ಞಾನ ಮತ್ತು ಅನುಭವದ ಸಂಗಮ. ಕಾಲಕಾಲಕ್ಕೆ ಯುವ ಜನರಿಗೆ ಮಾರ್ಗದರ್ಶನ ಮಾಡುತ್ತ ರಾಷ್ಟ್ರದ ಏಳಿಗೆಗೆ ಸಲಹೆ ಮಾಡುತ್ತಿರುತ್ತಾರೆ. ಸಂಧ್ಯಾಕಾಲದಲ್ಲಿ ತೀರ್ಥಯಾತ್ರೆ, ದೂರದ ಸ್ಥಳಗಳಿಗೆ ಹೋಗಲು ರೈಲನ್ನೇ ಅವಲಂಬಿಸಿರುತ್ತಾರೆ. 58 ವರ್ಷ ಮೇಲಿನ ಎಲ್ಲ ಹಿರಿಯ ನಾಗರಿಕರಿಗೆ ರಿಯಾಯಿತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಗುರುಮೂರ್ತಿ, ಬಿ.ಜಹಂಗೀರ್, ಯು.ಅಶ್ವಥಪ್ಪ, ಜಿ.ಉಮಾಮಹೇಶ್ವರ್, ಜಿ.ದೇವರೆಡ್ಡಿ, ಎಸ್.ಬಿ.ಜೋಗಳೇಕರ್, ಸೋಮಣ್ಣ, ಎಚ್.ಎಂ.ರೇವಣಸಿದ್ದಯ್ಯ, ಎಂ.ಜಿ.ಮನೋಹರ, ಮಹಾಂತೇಶ್, ಎಸ್.ಎಂ.ಬಾಷಾ, ಎಚ್.ತಿಪ್ಪೇಸ್ವಾಮಿ, ಜಿ.ಕೆ.ಆಚಾರ್, ಎಚ್.ಪೀರಾನ್‍ಸಾಬ್, ಗೋಪಿನಾಥ್, ಶಿವಪುತ್ರಪ್ಪ ಕುಂಬಾರೆ, ಶಾಂತ, ನಸೀಮಾ, ಎ.ಮಾರಿ, ಎನ್.ವೈ.ಅಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.