ADVERTISEMENT

ತೋಟಗಾರಿಕೆ ಇಲಾಖೆಯಿಂದ ಅಲೆಮಾರಿಗಳಿಗೆ ತರಕಾರಿ ಕಿಟ್

​ಪ್ರಜಾವಾಣಿ ವಾರ್ತೆ
Published 28 ಮೇ 2021, 14:52 IST
Last Updated 28 ಮೇ 2021, 14:52 IST
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಹೊಸಪೇಟೆಯಲ್ಲಿ ಅಲೆಮಾರಿ ಕುಟುಂಬದವರಿಗೆ ತರಕಾರಿ ಕಿಟ್‌ ವಿತರಿಸಿದರು
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಹೊಸಪೇಟೆಯಲ್ಲಿ ಅಲೆಮಾರಿ ಕುಟುಂಬದವರಿಗೆ ತರಕಾರಿ ಕಿಟ್‌ ವಿತರಿಸಿದರು   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಹೊರವಲಯದಲ್ಲಿ ಜೋಪಡಿಗಳಲ್ಲಿ ಜೀವನ ನಡೆಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ತೋಟಗಾರಿಕೆ ಇಲಾಖೆ ಹಾಗೂ ತುಂಗಭದ್ರಾ ತೋಟಗಾರಿಕೆ ರೈತ ಉತ್ಪಾದನಾ ಕಂಪನಿ ವತಿಯಿಂದ ಶುಕ್ರವಾರ 250 ತರಕಾರಿ ಕಿಟ್‌ ವಿತರಿಸಲಾಯಿತು.

ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ನುಗ್ಗೆಕಾಯಿ ಸೇರಿದಂತೆ ಇತರೆ ತರಕಾರಿ ಪದಾರ್ಥಗಳನ್ನು ರೈತರಿಂದ ಖರೀದಿಸಿ ಉಚಿತವಾಗಿ ವಿತರಿಸಲಾಯಿತು.

ತಾಲ್ಲೂಕಿನ ಕೊಂಡನಾಯಕನಹಳ್ಳಿಯಲ್ಲಿ ನೆಲೆಸಿರುವ ಬೀದರ್ ಜಿಲ್ಲೆಯ ಹುಮನಾಬಾದ್‌ ಪಟ್ಟಣದ ಅಲೆಮಾರಿ ಕುಟುಂಬಗಳಿಗೆ 50, ಕಾರಿಗನೂರಿನ ಅಲೆಮಾರಿಗಳಿಗೆ 100, ಎಂ.ಪಿ. ಪ್ರಕಾಶ್‌ ನಗರದ ಸುಂಕ್ಲಮ್ಮ ದೇವಸ್ಥಾನದ ಬಳಿಯ ಮಹಾರಾಷ್ಟ್ರ ಮೂಲದ ಅಲೆಮಾರಿಗಳಿಗೆ 50, ಒಂಬತ್ತನೇ ವಾರ್ಡಿನ ಬುಡಕಟ್ಟು ಜನರಿಗೆ 50 ಕಿಟ್‌ ವಿತರಿಸಿದರು.

ADVERTISEMENT

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್, ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ ಭರತ್, ವ್ಯವಸ್ಥಾಪಕ ವೇದಾವತಿ, ಸಂಡೂರಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮೇಶ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.