ADVERTISEMENT

ಸಂಡೂರು | ವಾಹನ ಚಕ್ರ ಸ್ಫೋಟ: ಜಿಂದಾಲ್‌ನಲ್ಲಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 23:02 IST
Last Updated 11 ಸೆಪ್ಟೆಂಬರ್ 2025, 23:02 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಸಂಡೂರು (ಬಳ್ಳಾರಿ ಜಿಲ್ಲೆ): ತೋರಣಗಲ್ಲಿನಲ್ಲಿರುವ ಜಿಂದಾಲ್ ಕಬ್ಬಿಣದ ಕಾರ್ಖಾನೆಯಲ್ಲಿ ಬುಧವಾರ ಟ್ರಕ್‌ ಚಕ್ರ ಸ್ಫೋಟಗೊಂಡು ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಬಳ್ಳಾರಿಯ ಕೌಲಬಜಾರ್ ನಿವಾಸಿ ಸೈಯದ್‍ ಅಸ್ಲಾಂ (40) ಮೃತರು. ಕಾರ್ಖಾನೆಯಲ್ಲಿ ಕಬ್ಬಿಣದ ಸರಳು ಸಾಗಿಸುವ ವಾಹನದ ದುರಸ್ತಿ ವೇಳೆ ಅವಘಡ ಸಂಭವಿಸಿದೆ.  

ಮೃತನ ಸಹೋದರ ಮೊಹಮ್ಮದ್‍ ಗೌಸ್ ದೂರು ನೀಡಿದ್ದಾರೆ. ತೋರಣಗಲ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಹಾರಕ್ಕೆ ಆಗ್ರಹಿಸಿ ಕಾರ್ಮಿಕನ ಕುಟುಂಬಸ್ಥರು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.