ಆನೇಕಲ್: ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್ ಸೇರಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳು ನಿಧಾನವಾಗಿ ಅಲ್ಲಿನ ಪರಿಸರ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ.
ಆನೆಗಳಾದ ಸುರೇಶ, ತುಳಸಿ, ಗೌರಿ, ಶ್ರುತಿ ಆರೋಗ್ಯವಾಗಿದ್ದು, ಲವಲವಿಕೆಯಿಂದ ಇವೆ. ಅಕ್ಕಿ ಮತ್ತು ರಾಗಿಯನ್ನು ಮುಖ್ಯ ಆಹಾರವಾಗಿ ನೀಡಲಾಗುತ್ತಿದೆ.
ಬನ್ನೇರುಘಟ್ಟದ ಮಾವುತರು, ಕಾವಾಡಿಗರು, ಆನೆ ಮೇಲ್ವಿಚಾರಕರು ಮತ್ತು ಜೀವಶಾಸ್ತ್ರಜ್ಞೆ ಆನೆಗಳ ಚಲನವಲನ ಮತ್ತು ಆರೋಗ್ಯದ ಮೇಲೆ ಕಣ್ಣಿಟ್ಟಿದ್ದಾರೆ.
ಮೃಗಾಲಯ ಪ್ರಾಧಿಕಾರ, ಕೇಂದ್ರ ಮೃಗಾಲಯ ಪ್ರಾಧಿಕಾರ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ, ರಾಜ್ಯ ಅರಣ್ಯ ಮತ್ತು ಪಶುವೈದ್ಯಕೀಯ ಅನುಮೋದನೆ ಇಲಾಖೆಗಳ ನೆರವಿನಿಂದ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಸಾಕಾರಗೊಂಡಿದೆ.
ಆನೆಗಳು ಜಪಾನ್‌ಗೆ ತೆರಳುವ ಮುನ್ನ ಸಂಪೂರ್ಣ ಆರೋಗ್ಯ ಪ್ರಮಾಣೀಕರಣ ಮಾಡಲಾಗಿತ್ತು. ಭಾರತ ಮತ್ತು ಜಪಾನ್‌ನ ರಾಯಭಾರಿ ಕಚೇರಿಯೂ ಪ್ರಾಣಿಗಳ ವಿನಿಮಯಕ್ಕೆ ಬೆಂಬಲ ನೀಡಿತ್ತು ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.