ADVERTISEMENT

ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಕರಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 19:40 IST
Last Updated 12 ಮೇ 2022, 19:40 IST
ಕರಡಿ ಮೋಹನ್
ಕರಡಿ ಮೋಹನ್   

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನ ಮೃಗಾಲಯ ಹಿಮಾಲಯದ ಕಪ್ಪು ಕರಡಿ ಮೋಹನ್‌ (27) ವಯೋಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರಡಿ ಮೋಹನ್‌ನನ್ನು ಬೆಳಗಾವಿ ನ್ಯೂ ಗ್ರ್ಯಾಂಡ್‌ ಸರ್ಕಸ್‌ನಿಂದ 2002ರಲ್ಲಿ ಸಂರಕ್ಷಿಸಿ ಜೈವಿಕ ಉದ್ಯಾನದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಲಿಂಪೋ ಸರ್ಕೋಮಾ (ಹಾನಿಕರಕ ಗಡ್ಡೆ) ಎಂಬ ಕಾಯಿಲೆಯಿಂದ ಬಳಲುತ್ತಿತ್ತು. 15 ದಿನಗಳಿಂದ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT