ರೈತರು, ಬಡವರು ಮತ್ತು ಹಳ್ಳಿಗಳಲ್ಲಿ ವಾಸಿಸುವವರ ಮೂಲಸೌಕರ್ಯ ಬಗ್ಗೆ ಬಜೆಟ್ ಸ್ಪಷ್ಟ ಯೋಜನೆ ನೀಡಿಲ್ಲ. ಬೆಳೆಗಳಿಗೆ ಯಾವ ಬೆಲೆ ನೀಡಲಾಗುತ್ತಿದೆ ಎಂಬುದು ಅಸ್ಪಷ್ಟವಾಗಿದೆ. ಮನರೇಗಾ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ದುರ್ಬಲಗೊಳಿಸಲಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಪರಿಣಾಮಕಾರಿ ಕ್ರಮಗಳು ಕಾಣಿಸಲಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ಅಂಶಗಳಿಲ್ಲ
ಬಿ.ಸಿ. ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ, ಯುವ ಕಾಂಗ್ರೆಸ್ ಕಾನೂನು ಘಟಕ
ಬಜೆಟ್‌ನಲ್ಲಿ ತೆಂಗಿನಕಾಯಿ, ಗೋಡಂಬಿ, ಕೋಕೋ, ವಾಲ್ನಟ್, ಪೈನ್‌ನಟ್ ಮುಂತಾದ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಆರ್ಥಿಕ ಬೆಂಬಲ ಘೋಷಿಸಲಾಗಿದೆ. ಇದು ರೈತರ ಆದಾಯ ಹೆಚ್ಚಿಸುವುದಲ್ಲ, ಹೊಸ ತಂತ್ರಜ್ಞಾನ ಮತ್ತು ಮಾರುಕಟ್ಟೆ ಅವಕಾಶ ಹೊಂದಿಸುವ ಮೂಲಕ ಕೃಷಿಗೆ ಹೊಸ ಚೈತನ್ಯ ನೀಡಲಿದೆ
⇒ಗಜೇಂದ್ರ, ದೇವನಹಳ್ಳಿ
ಹೆಣ್ಣುಮಕ್ಕಳ ಹಾಸ್ಟೆಲ್, ಶ್ರೀಗಂಧ ಬೆಳೆಗೆ ಉತ್ತೇಜನ, ತೆಂಗು ಅಭಿವೃದ್ಧಿಗೆ ಪ್ರೋತ್ಸಾಹ, ಟೂರಿಸ್ಟ್ ಗೈಡ್‌ಗಳಿಗೆ ತರಬೇತಿ, ಕ್ಯಾನ್ಸರ್ ಔಷಧಿ ತೆರಿಗೆ ವಿನಾಯಿತಿ. ಎಲ್ಲವೂ ಜನಹಿತದ ಬಜೆಟ್, ತೆರಿಗೆ ಹೊರೆ ಕಡಿಮೆ ಮಾಡಿದ ಬಜೆಟ್ ಎಂದು ಹೇಳಬಹುದು
⇒ಅನಿಲ್ ಯಾದವ್, ಬಿಜೆಪಿ ಮುಖಂಡ
ಅನಿಮೇಷನ್, ವೀಶ್ಯುವಲ್ ಎಫೆಕ್ಟ್, ಗೇಮಿಂಗ್, ಕಾಮಿಕ್ಸ್ ಮುಂತಾದ ಡಿಜಿಟಲ್ ಕ್ರಿಯೇಟಿವ್ ಕ್ಷೇತ್ರಗಳಿಗೆ ಬಜೆಟ್ ಉತ್ತೇಜನ ನೀಡಿದೆ. ₹1.4 ಲಕ್ಷ ಕೋಟಿ ಮೀಸಲಿಡಲಾಗಿದೆ. ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಸಹಯೋಗದಲ್ಲಿ 15,000 ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ. ಇದು ಹೊಸ ಶೈಕ್ಷಣಿಕ ಕ್ರಾಂತಿಗೆ ದಾರಿತೋರುತ್ತಿದೆ
⇒ಚಂದ್ರಶೇಖರ್, ಮುಖ್ಯಸ್ಥ, ನಂದಿ ರೂರಲ್ ಎಜುಕೇಶನ್ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.