ADVERTISEMENT

ಕಂಟೈನರ್‌ಗೆ ಬೆಂಕಿ: ಸುಟ್ಟುಕರಕಲಾದ ದ್ವಿಚಕ್ರ ವಾಹನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 14:07 IST
Last Updated 2 ಮಾರ್ಚ್ 2024, 14:07 IST
ಆನೇಕಲ್‌ಗೆ ಸಮೀಪದ ತಮಿಳುನಾಡಿನ ಉಳೀರನಹಳ್ಳಿ ಬಳಿ ಕಂಟೈನರ್‌ಗೆ ಬೆಂಕಿ ಹೊತ್ತಿಕೊಂಡಿರುವುದು
ಆನೇಕಲ್‌ಗೆ ಸಮೀಪದ ತಮಿಳುನಾಡಿನ ಉಳೀರನಹಳ್ಳಿ ಬಳಿ ಕಂಟೈನರ್‌ಗೆ ಬೆಂಕಿ ಹೊತ್ತಿಕೊಂಡಿರುವುದು   

ಆನೇಕಲ್ : ಆನೇಕಲ್‌ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಉಳೀರನಹಳ್ಳಿ ಬಳಿ ಶುಕ್ರವಾರ ಸಂಜೆ ಎಲೆಕ್ಟ್ರಿಕ್‌ ಬೈಕ್‌ ಸಾಗಾಣಿಕೆ ಮಾಡುತ್ತಿದ್ದ ಕಂಟೈನರ್‌ನಲ್ಲಿ ಬೆಂಕಿ ಹೊತ್ತಿಕೊಂಡು 20 ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟುಕರಕಲಾಗಿದೆ.

ಏಥರ್‌ ಕಂಪನಿಗೆ ಸೇರಿದ ವಿದ್ಯುತ್ ಬೈಕ್‌ಗಳನ್ನು ಕಂಟೈನರ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಂಟೈನರ್‌ ಒಳಗೆ ಬೆಂಕಿ ಕಾಣಿಸಿಕೊಂಡು ಕಂಟೈನರ್‌ ಮೇಲ್ಭಾಗದಲ್ಲಿದ್ದ 20ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿದೆ.

ಕೂಡಲೇ ವಾಹನ ನಿಲ್ಲಿಸಿದ ಚಾಲಕ ಡೆಂಕಣಿಕೋಟೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತಮಿಳುನಾಡಿನ ಮತ್ತಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.