ADVERTISEMENT

ರಾಜಾಪುರ: 1,300 ಮಂದಿಗೆ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:01 IST
Last Updated 1 ಸೆಪ್ಟೆಂಬರ್ 2025, 2:01 IST
ಆನೇಕಲ್ ತಾಲ್ಲೂಕಿನ ರಾಜಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮತ್ತು ವೈದ್ಯ ಆಂಜಿನಪ್ಪ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ರಾಜಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮತ್ತು ವೈದ್ಯ ಆಂಜಿನಪ್ಪ ಉದ್ಘಾಟಿಸಿದರು   

ಆನೇಕಲ್: ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಪುರ ಗುರುಕುಲ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಮೈಕ್ರೋಲ್ಯಾಬ್‌ ಲಿಮಿಟೆಡ್‌, ದೇವರಾಜ್‌ ಮೂಲಚಂದ್‌ ನಹರ್ ಚಾರಿಟಬಲ್‌ ಟ್ರಸ್ಟ್‌, ತಾಲ್ಲೂಕು ಆಡಳಿತ, ಹೆನ್ನಾಗರ ಗ್ರಾಮ ಪಂಚಾಯಿತಿಯಿಂದ ಶನಿವಾರ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ ಕಿಮ್ಸ್‌ ಆಸ್ಪತ್ರೆ, ನಾರಾಯಣ ಹೃದಯಾಲಯ, ಆಕ್ಸ್‌ಫರ್ಡ್‌, ನಿಸರ್ಗ ಕಣ್ಣಿನ ಆಸ್ಪತ್ರೆಯ ವೈದ್ಯರು ಪಾಲ್ಗೊಂಡಿದ್ದರು. ಚರ್ಮ, ಮೂಳೆ, ಇಎನ್‌ಟಿ, ಇಸಿಜಿ, ಕಣ್ಣು, ದಂತ ಸೇರಿದಂತೆ 15ಕ್ಕೂ ಹೆಚ್ಚು ವಿಭಾಗಗಳಲ್ಲಿ ನಡೆದ ತಪಾಸಣೆಯಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಗ್ರಾಮಗಳ 1,300 ಮಂದಿ ಪಾಲ್ಗೊಂಡಿದ್ದರು.  ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಆನೇಕಲ್‌ ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಮಾತನಾಡಿ, ಹಣ ಸಂಪಾದನೆ ಮಾಡಬಹುದು ಆದರೆ, ಆರೋಗ್ಯ ಕಾಪಾಡಲು ನಮ್ಮ ಶ್ರಮ ಅತ್ಯಂತ ಅವಶ್ಯಕ. ಆರೋಗ್ಯದ ವಿಷಯದಲ್ಲಿ ಯಾರು ಸಹ ನಿರ್ಲಕ್ಷ್ಯ ವಹಿಸಬಾರದು. ಉತ್ತಮ ಆರೋಗ್ಯ ಪಡೆಯಲು ಯೋಗ, ವ್ಯಾಯಾಮ, ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ADVERTISEMENT

ವೈದ್ಯ ಡಾ.ಆಂಜಿನಪ್ಪ, ಯುವಕರು ಹಣ್ಣು, ತರಕಾರಿ, ಮೊಟ್ಟೆ ಸೇರಿದಂತೆ ಪೌಷ್ಠಿಕಾಂಶವಿರುವ ಆಹಾರ ಸೇವಿಸಬೇಕು. ವಿಜ್ಞಾನದಿಂದ ಸಮಾಜ ಉತ್ತಮವಾಗಿ ಬೆಳೆಯುತ್ತದೆ. ಮೂಢನಂಬಿಕೆಗಳಿಗೆ ಬಲಿಯಾಗದೇ ವೈಜ್ಞಾನಿಕವಾಗಿ ಜೀವನ ನಡೆಸಬೇಕು ಎಂದರು.

ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಮೂಲ್‌ ನಿರ್ದೇಶಕ ಆರ್‌.ಕೆ.ರಮೇಶ್‌, ಚಾರಿಟಬಲ್‌ ಟ್ರಸ್ಟ್‌ ಮುಖ್ಯಸ್ಥ ಮೂಲಚಂದ್‌ ನಹರ್‌, ಎಸ್‌ಎಸ್‌ಎನ್‌ ಟ್ರಸ್ಟ್‌ನ ರಾಜಶೇಖರ್, ಸೋಮಶೇಖರ್‌, ಎಡಿಎಲ್‌ಆರ್‌ ಮದನ್‌, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯ್‌, ಸಾಮಾಜಿಕ ಸಮಿತಿ ಅಧ್ಯಕ್ಷ ಕಿರಣ್‌, ಸದಸ್ಯರಾದ ಎಚ್‌.ಜೆ.ಪ್ರಸನ್ನಕುಮಾರ್, ಮಹೇಶ್, ಭಾಗ್ಯ ಚಂದ್ರಶೇಖರ್‌, ಲಲಿತಾ ರಾಜು, ಆನಂದ್‌, ಯಲ್ಲಾರೆಡ್ಡಿ, ಲಲಿತಾ ಗುರುದೇವ್‌, ಮನು, ನಟರಾಜ್‌, ಆರ್‌.ಎಸ್.ಪ್ರಕಾಶ್, ದೇವರಾಜ್‌, ದೇವರಾಜ್‌ ನಾಯಕ್‌, ಸರ್ವೇ ಚಂದ್ರಶೇಖರ್‌, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಶಿವಣ್ಣ ಇದ್ದರು.

ರಾಜಾಪುರದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.