ADVERTISEMENT

ಹೊಸಕೋಟೆ: ಕಣ್ಮನ ಸೆಳೆಯುತ್ತಿರುವ ಆಕರ್ಷಕ ಗಣೇಶೋತ್ಸವ!

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:26 IST
Last Updated 29 ಆಗಸ್ಟ್ 2025, 5:26 IST
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ತಿಗಳರ ಸಂಘದ ನಿಕಟ ಪೂರ್ವ ರಾಜ್ಯ ಅಧ್ಯಕ್ಷರಾದ .ಸಿ.ಜೈರಾಜ್ ನಿವಾಸದಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಭಿನ್ನವಾಗಿ ಪ್ರತಿಷ್ಠಾಪಿಸಿದ್ಡರು
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ತಿಗಳರ ಸಂಘದ ನಿಕಟ ಪೂರ್ವ ರಾಜ್ಯ ಅಧ್ಯಕ್ಷರಾದ .ಸಿ.ಜೈರಾಜ್ ನಿವಾಸದಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಭಿನ್ನವಾಗಿ ಪ್ರತಿಷ್ಠಾಪಿಸಿದ್ಡರು   

ಹೊಸಕೋಟೆ: ನಗರದ ಬಿದಿ, ಮೈದಾನ, ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಗಣೇಶ ಮೂರ್ತಿಗಳು, ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆಕರ್ಷಕ ಮಂಟಪ, ಕಣ್ಣು ಕೋರೈಸುವ ದೀಪಾಲಂಕಾರ ಜನರನ್ನು ಸೆಳೆಯುತ್ತಿವೆ. 

ನಗರದಲ್ಲಿ ಗಣೇಶೋತ್ಸವ ಸಂಭ್ರಮ ಮನೆಮಾಡಿದ್ದು ಯಾವ ಬೀದಿಗೆ ಹೋದರೂ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಕಾಣುತ್ತಿವೆ. ಜಿನಗುವ ಮಳೆಯ ಮಧ್ಯೆಯೂ ಜನರು ಗಣೇಶನನ್ನು ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಎಲ್ಲ ಜಾತಿ, ಜನಾಂಗ ಮತ್ತು ಧರ್ಮದವರೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಗರದಲ್ಲಿ ಗಣೇಶ ಸಾಮರಸ್ಯದ ಸಂಕೇತವಾಗಿದ್ದಾನೆ.

ಬಡಾವಣೆ ಗಣೇಶ ಮಂಟಪಗಳಲ್ಲಿ ಪ್ರಸಾದ ವಿತರಣೆ, ಅನ್ನ ಸಂತಪರ್ಪಣೆ ನಡೆಯುತ್ತಿವೆ. ಸಂಜೆಯಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟುತ್ತಿವೆ. ಇಡೀ ಓಣಿಯ ಜನರು ಒಟ್ಟಿಗೆ ಸೇರಿ ಸಂತೋಷದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.

ADVERTISEMENT

ಈ ವರ್ಷ ನಗರದ ಜನರು ಭಿನ್ನವಾಗಿ ಗಣೇಶ ಮೂರ್ತಿಗಳನ್ನು ಸಿಂಗರಿಸಿ ಖುಷಿ ಪಡುತ್ತಿದ್ದಾರೆ. ಹಳೆಪೇಟೆಯ ಶ್ರೀರಾಮ ದೇವಸ್ಥಾನದ ಬಳಿ ಕೋಟೆ ಬಾಯ್ಸ್ ಗೆಳೆಯರ ಬಳಗ ಪರಿಸರ ಸ್ನೇಹಿ ಹಸಿರು ಗಣೇಶನನ್ನು ಪ್ರತಿಷ್ಠಾಪಿಸಿದೆ.

ಅರಳೆಪೇಟೆಯಲ್ಲಿ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಪೆಹಲ್ಗಾಮ್‌ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಬಳಸಿದ ಆಯುಧಗಳ ಅಣುಕು ಪ್ರದರ್ಶನ ಗಮನ ಸೆಳೆಯುತ್ತಿದೆ.

18 ವರ್ಷಗಳಿಂದ ಪ್ರತಿ ವರ್ಷ ವಿಭಿನ್ನ ರೀತಿಯ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದೇವೆ. ಈ ಸಲವೂ ಪ್ರಕೃತಿ ಸ್ನೇಹಿ ಹಸಿರು ಗಣಪನನ್ನು ಪ್ರತಿಷ್ಠಾಪಿಸಿದ್ದೇವೆ. - ಪದಾಧಿಕಾರಿಗಳು ಕೋಟೆ ಬಾಯ್ಸ್ ಗೆಳೆಯರ ಬಳಗ ಹೊಸಕೋಟೆ ಗಣೇಶೋತ್ಸವ ಎಂದರೆ ಬರೀ ಅದ್ದೂರಿ ಅಡಂಬರದ ಆಚಾರಣೆ ಅಲ್ಲ. 34 ವರ್ಷಗಳಿಂದ ಗಣೇಶೋತ್ಸವ ಸಂದರ್ಭದಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಈ ಬಾರಿ ಆಪರೇಷನ್ ಸಿಂಧೂರ ಅಣುಕು ಪ್ರದರ್ಶನ ಮಾಡಿದ್ದೇವೆ.
–ತಿಲಕ್ ನಾರಾಯಣ್ ಸ್ವಾಮಿ ವಿವಕಾನಂದ ಗೆಳೆಯರ ಬಳಗ ಹೊಸಕೋಟೆ
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ಅರಳೆಪೇಟೆಯಲ್ಲಿ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ಪೆಹಲ್ಗಾಂ ದಾಳಿಯಲ್ಲಿ ಮಾಡಿದವರಿಗೆ ಭಾವಪೂರ್ಣ ಶ್ರದ್ದಾಂಜಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಅಣುಕು ಪ್ರದರ್ಶನ ಮಾಡಲಾಗಿತ್ತು
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ಹಳೆಪೇಟೆಯ ಶ್ರೀರಾಮ ದೇವಸ್ಥಾನದ ಬಳಿ ಕೋಟೆ ಬಾಯ್ಸ್ ಗೆಳೆಯರ ಬಳಗದ ವತಿಯಿಂದ ಪರಿಸರ ಸ್ನೇಹಿ ಹಸಿರು ಗಣೇಶನನ್ನು ಪ್ರತಿಷ್ಟಾಪಿಸಿದ್ದರು
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ಹಳೆಪೇಟೆಯ ಶ್ರೀರಾಮ ದೇವಸ್ಥಾನದ ಬಳಿ ಕೋಟೆ ಬಾಯ್ಸ್ ಗೆಳೆಯರ ಬಳಗದ ವತಿಯಿಂದ ಪರಿಸರ ಸ್ನೇಹಿ ಹಸಿರು ಗಣೇಶನನ್ನು ಪ್ರತಿಷ್ಟಾಪಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.