ADVERTISEMENT

ಶಾಸ್ತ್ರ ಹೇಳುವ ನೆಪದಲ್ಲಿ ₹5 ಲಕ್ಷ ದೋಚಿದ ಬುಡುಬುಡಿಕೆ ದಾಸಯ್ಯ ವೇಷಧಾರಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 20:35 IST
Last Updated 6 ನವೆಂಬರ್ 2025, 20:35 IST
<div class="paragraphs"><p>ಹಣ </p></div>

ಹಣ

   

ಸೂಲಿಬೆಲೆ(ಹೊಸಕೋಟೆ): ಇಲ್ಲಿನ ಪೋಲಿಸ್ ಠಾಣಾ ವ್ಯಾಪ್ತಿಯ ಚನ್ನಬೈರೇಗೌಡ ನಗರದಲ್ಲಿ ಗುರುವಾರ ಬೆಳಗ್ಗೆ ಶಾಸ್ತ್ರ ಹೇಳುವ ನೆಪದಲ್ಲಿ ಬಂದ ಬುಡುಬುಡಿಕೆ ದಾಸಯ್ಯ ವೇಷದಾರಿ ₹5 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಸೂಲಿಬೆಲೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ಸೂಲಿಬೆಲೆ ನಿವಾಸಿ ಲೀಲಾವತಿ ಎಂಬುವವರು ಚಿನ್ನ ಕಳೆದುಕೊಂಡವರು. ಗುರುವಾರ ಬೆಳಗ್ಗೆ ಬುಡುಬಡುಕೆ ದಾಸಯ್ಯನ ಬಳಿ ಶಾಸ್ತ್ರ ಕೇಳುವ ಸಮಯದಲ್ಲಿ ಇಬ್ಬರು ಮಕ್ಕಳು ಹಾಗೂ ಲೀಲಾವತಿ ಮನೆಯಲ್ಲಿ ಇದ್ದರು. ಬುಡುಬಡುಕೆ ದಾಸಯ್ಯ ಶಾಸ್ತ್ರ ಹೇಳಲು ಹಣ ಕೇಳಿದಾಗ ಪಕ್ಕದ ಮನೆಯವರಿಗೆ ಹಣ ಕೇಳಲು ಪೋನ್ ಮಾಡಿದ ಸಮಯದಲ್ಲಿ ಮನೆಯ ಬೀರುವಿನಲ್ಲಿ ₹5 ಲಕ್ಷ ಹಣ, 20 ಗ್ರಾಂ ಚಿನ್ನವನ್ನು ಹಾಡು ಹಗಲೇ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಲಿಬೆಲೆ ಪೋಲಿಸರು ಸ್ಥಳ ಪರಿಶೀಲನೆ ನೆಡೆಸಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.