
ಆನೇಕಲ್ : ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಸರ್ಜಾಪುರ ಹೋಬಳಿ ರೈತರು ವಿಶಿಷ್ಟವಾದ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಳೆದ 200 ದಿನಗಳಿಂದ ನಡೆಸುತ್ತಿರುವ ಸತತ ಹೋರಾಟದ ಭಾಗವಾಗಿ ತಾವು ಬೆಳೆದ 16 ಟನ್ ತರಕಾರಿಯನ್ನು ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಅರ್ಪಿಸಿದರು.
ಈ ಅರ್ಪಣೆಯಲ್ಲಿ 15,960 ಕೆಜಿ ಸಿಹಿ ಕುಂಬಳಕಾಯಿ, 1,400 ಕೆಜಿ ಸಾಂಬಾರ್ ಸೌತೆಕಾಯಿ ಮತ್ತು 50 ಕೆ.ಜಿ ದೊಣ್ಣೆ ಮೆಣಸಿನಕಾಯಿ ಸೇರಿದೆ. 'ನಮ್ಮ ಭೂಮಿ ನಮ್ಮ ಹಕ್ಕು' ಮತ್ತು 'ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ' ಗೌರವ ಅಧ್ಯಕ್ಷ ಜಯಪ್ರಕಾಶ್, ಅಧಿಕಾರಿಗಳು ಭೂಮಿಯನ್ನು ಬಂಜರು ಎಂದು ವರದಿ ನೀಡಿದ್ದಾರೆ. ಬಂಜರು ಭೂಮಿಯಲ್ಲಿ ಸಮೃದ್ಧ ಫಸಲು ಬೆಳೆಯಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಚಿನ್ನಪ್ಪ ವೈ.ಚಿಕ್ಕಹಾಗಡೆ, ಗೋಪಸಂದ್ರ ಉಮೇಶ್, ಹರೀಶ್, ಅಣ್ಣಯ್ಯ, ಬಸವರಾಜು, ಮುತ್ತಾನಲ್ಲೂರು ಸೋಮಶೇಖರ ರೆಡ್ಡಿ, ಬಿಕ್ಕನಹಳ್ಳಿ ಅಶೋಕ್ ರೆಡ್ಡಿ, ಮಂಜುಳಾ ಸೋಮಶೇಖರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಸಂಪ್ರೀತಾ, ಬಸವರಾಜು, ಜಯಲಕ್ಷ್ಮಿ, ಶಂಕರ ರೆಡ್ಡಿ ಸೇರಿದಂತೆ ಹಲವರು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೃಷಿ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿಸಿ ಹೋರಾಟ ಸಮಿತಿ ವತಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನಕ್ಕೆ 15960ಕೆಜಿ ಸಿಹಿ ಕುಂಬಳಕಾಯಿ, 1400 ಕೆಜಿ ಸಾಂಬರ್ ಸೌತೆಕಾಯಿ, 50ಕೆಜಿ ದೊಣ್ಣೆ ಮೆಣಸಿನ ಕಾಯಿಯನ್ನು ನೀಡುವ ಮೂಲಕ ರೈತರು ಪ್ರತಿಭಟಿಸಿದರು.
ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಕಳೆದ 200ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.
ನಮ್ಮ ಭೂಮಿ ನಮ್ಮ ಹಕ್ಕು ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧೀನ ಒಳಪಡುತ್ತಿರುವ ಭೂಮಿಯನ್ನು ಬಂಜರು ಭೂಮಿ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆ ಅಧಿಕಾರಿಗಳಿಗೆ ನೈಜ ವರದಿಯನ್ನು ತಿಳಿಸುವ ಸಲುವಾಗಿ 15960 ಕೆಜಿ ಸಿಹಿ ಕುಂಬಳಕಾಯಿ, 1400ಕೆಜಿ ಸಾಂಬರ್ ಸೌತೇಕಾಯಿ, 50ಕೆಜಿ ದೊಣ್ಣೆ ಮೆಣಸಿನ ಕಾಯಿ ಸೇರಿದಂತೆ 16 ಟನ್‌ನಷ್ಟು ತರಕಾರಿ ನೀಡುವ ಮೂಲಕ ರೈತರು ನೈಜ ವರದಿಯನ್ನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತಿಳಿಸಿದ್ದಾರೆ ಎಂದರು.
ರೈತರಾದ ಚಿನ್ನಪ್ಪ.ವೈ.ಚಿಕ್ಕಹಾಗಡೆ, ಗೋಪಸಂದ್ರ ಉಮೇಶ್, ಹರೀಶ್, ಅಣ್ಣಯ್ಯ, ಬಸವರಾಜು, ಮುತ್ತಾನಲ್ಲೂರು ಸೋಮಶೇಖರರೆಡ್ಡಿ, ಬಿಕ್ಕನಹಳ್ಳಿ ಅಶೋಕ್‌ರೆಡ್ಡಿ, ಮಂಜುಳ ಸೋಮಶೇಖರರೆಡ್ಡಿ, ಶ್ರೀನಿವಾಸ ರೆಡ್ಡಿ, ಸಂಪ್ರೀತಾ, ಬಸವರಾಜು, ಜಯಲಕ್ಷ್ಮೀ, ಶಂಕರರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.