ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಸಮೀಪದ ಅದ್ದೆ ತಿಮ್ಮರಾಯ ದೇವಾಲಯ ಆವರಣದಲ್ಲಿ ಸೋಮವಾರ ಕುವೆಂಪು ಅವರ ಮಂತ್ರ ಮಾಂಗಲ್ಯದ ಅಡಿ ಜೋಡಿಯೊಂದು ದಾಂಪತ್ಯಕ್ಕೆ ಕಾಲಿಟ್ಟಿತು.
ಸರಳವಾಗಿ ಅಂತರಜಾತಿ ವಿವಾಹವಾದ ಶಿಲ್ಪ ಮತ್ತು ಸಂದೀಪ್ ನವದಂಪತಿಗೆ ಪ್ರಾಧ್ಯಾಪಕ ಪ್ರಕಾಶ್ ಮಂಟೇದ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯ ಬೋಧಿಸಿದರು.
ಜಾತಿ ಮೀರಿದ ಬದುಕು ಮುಖ್ಯವಾಗಬೇಕು ಎಂದು ಮಂಜುನಾಥ ಅದ್ದೆ ಹೇಳಿದರು.
ವಿಶ್ವನಾಥ ಬಾತಿ, ಆವಲಹಳ್ಳಿ ಶ್ರೀನಿವಾಸ್, ಗ್ರಾಮ ಪಂಚಾತಿಯಿ ಸದಸ್ಯ ಸಂತೋಷ್, ಸಾದೇನಹಳ್ಳಿ ಚಿಕ್ಕಣ್ಣ, ಹರೀಶ್, ಗೋವಿಂದರಾಜ್, ಚಂದ್ರಶೇಖರ್, ವಿಜಯಕುಮಾರ್ ಅದ್ದೆ, ಹನುಮಂತರಾಜು, ಕಾಕೋಳು ಬಾಬು, ನವೀನ್ ಸಾದೇನಹಳ್ಳಿ, ದೊಡ್ಡಬ್ಯಾಲಕೆರೆ ಮುನಿರಾಜು, ಮುತ್ತಗದಹಳ್ಳಿರವಿ, ಅರಕೆರೆ ಶ್ರೀನಿವಾಸ್, ಹನುಮಂತರಾಜು, ಲಿಂಗನಹಳ್ಳಿ ಬಸವರಾಜು, ಶ್ರೀರಾಮಪ್ಪ ತರಹುಣಸೆ, ಕೃಷ್ಣನಾಯಕ್, ಅಶೋಕ್ ವಿವಾಹಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.