ADVERTISEMENT

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೆಟ್ ಬಾಲ್ ಕ್ರೀಡಾಕೂಟ:ದಾಬಸ್‌ಪೇಟೆ ಕಾಲೇಜು ಪ್ರಥಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 2:09 IST
Last Updated 28 ಅಕ್ಟೋಬರ್ 2025, 2:09 IST
ನೆಟ್ ಬಾಲ್ ಪಂದ್ಯಾವಳಿ
ನೆಟ್ ಬಾಲ್ ಪಂದ್ಯಾವಳಿ   

ಸೂಲಿಬೆಲೆ (ಹೊಸಕೋಟೆ): ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ  ನೆಟ್ ಬಾಲ್ ಕ್ರೀಡಾಕೂಟಕ್ಕೆ ಸೋಮವಾರ ನಡೆಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕ್ರೀಡಾಕೂಟಲ್ಲಿ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಈ ಮೂರು ತಾಲ್ಲೂಕುಗಳ ಪದವಿಪೂರ್ವ ಕಾಲೇಜುಗಳ ಆರು ತಂಡ  ಭಾಗವಹಿಸಿದ್ದವು.

ಗ್ರಾಮ ಪಂಚಾಯತಿ ಅಧ್ಯಕ್ಷ ಜನಾರ್ಧನ ರೆಡ್ಡಿ ಮತ್ತು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 

ADVERTISEMENT

ಬಾಲಕರ ವಿಭಾಗ: ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆಯ ಜ್ಞಾನ ಸಂಗಮ ಪದವಿ ಪೂರ್ವ ಕಾಲೇಜು (ಪ್ರಥಮ), ಸೂಲಿಬೆಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು (ದ್ವಿತೀಯ) 

ಬಾಲಕಿಯರ ವಿಭಾಗ: ನೆಲಮಂಗಲ ತಾಲ್ಲೂಕಿನ ದಾಬಸ್‌ ಪೇಟೆಯ ಜ್ಞಾನ ಸಂಗಮ ಪದವಿ ಪೂರ್ವ ಕಾಲೇಜು (ಪ್ರಥಮ), ದೇವನಹಳ್ಳಿ ವಿಜಯ ಕಾಲೇಜು (ದ್ವಿತೀಯ)

ಕ್ರೀಡಾ ಕಾರ್ಯದರ್ಶಿಗಳಾದ ಕುಮಾರ್ ಎನ್ ಮತ್ತು ರೇಣುಕಾ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಬ್ರಮಣಿ, ಮೃತ್ಯುಂಜಯ, ಸರಸ್ಪತಿ, ವಿಜಯ ಗಂಗಾಧರ್, ಶ್ರೀಕೃಷ್ಣ, ನಾಗರಾಜ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಬೆಟ್ಟಹಳ್ಳಿ ಗೋಪಿನಾಥ್, ಜಿಯಾವುಲ್ಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.