ADVERTISEMENT

ನರ ಶಾಸ್ತ್ರಜ್ಞ, ಫಿಸಿಯೋಥೆರಪಿಸ್ಟ್ ಹುದ್ದೆಗೆ ನೇರ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:05 IST
Last Updated 15 ಅಕ್ಟೋಬರ್ 2025, 2:05 IST
   

ದೇವನಹಳ್ಳಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ನರ ಶಾಸ್ತ್ರಜ್ಞ(ನ್ಯೂರೋಲಾಜಿಸ್ಟ್) ಮತ್ತು ಫಿಸಿಯೋಥೆರಪಿಸ್ಟ್ ಅನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಏರ್ಪಡಿಸಿದೆ.

ನರ ಶಾಸ್ತ್ರಜ್ಞ ಅಥವಾ ನ್ಯೂರೋಲಾಜಿಸ್ಟ್ ಹುದ್ದೆಗೆ ಡಿಎಂ/ಡಿ.ಎನ್.ಬಿ- ನ್ಯೂರೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ವೇತನ ₹ 1,50,000 ಅಥವಾ ಎಂ.ಡಿ/ಡಿ.ಎನ್.ಬಿ- ಜನರಲ್ ಮೆಡಿಸನ್ ಮಾಸಿಕ ವೇತನ ₹ 1,00,000 ಅಥವಾ ಎಂಬಿಬಿಎಸ್ ಜೊತೆಗೆ 5 ವರ್ಷ ಅನುಭವ ಹೊಂದಿರಬೇಕು ಮಾಸಿಕ ವೇತನ ₹ 60,000 ಹೊಂದಿದ್ದು ಅಭ್ಯರ್ಥಿಯು ವಯೋಮಿತಿ 60 ಒಳಗಿರಬೇಕು.

ಫಿಸಿಯೋಥೆರಪಿಸ್ಟ್ ಹುದ್ದೆಗೆ ಅಭ್ಯರ್ಥಿಯು ಬಿಪಿಪಿ ವಿದ್ಯಾರ್ಹತೆ ಹೊಂದಿದ್ದು, ವಯೋಮಿತಿ 45 ವರ್ಷ ಒಳಗಿರಬೇಕು. ಮಾಸಿಕ ವೇತನ 25,000 ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಅ.27 ರಂದು ಬೆಳಗ್ಗೆ 11 ರಿಂದ 3 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ 207, 2ನೇ ಮಹಡಿ ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬಹುದು.

ADVERTISEMENT

ದೂರವಾಣಿ: 080-29787452, Email :- dhobangalorerural@gmail.com ಇಲ್ಲಿಗೆ ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.