ADVERTISEMENT

ವಿಜಯಪುರ| ಕಳ್ಳತನಕ್ಕೆ ಬಂದವನು ಮನೆಯಲ್ಲಿಯೇ ಲಾಕ್: ಪೊಲೀಸರಿಗೆ ಮಾಹಿತಿ ನೀಡಿದ ಜನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:06 IST
Last Updated 19 ಫೆಬ್ರುವರಿ 2026, 5:06 IST
ನವೀನ್
ನವೀನ್   

ವಿಜಯಪುರ (ದೇವನಹಳ್ಳಿ): ಪಟ್ಟಣದ ಸಮೀಪದ ಚಿಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಕಳ್ಳತನ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಅದೇ ಮನೆಯಲ್ಲಿಯೇ ಲಾಕ್ ಆಗಿದ್ದಾನೆ.

ಯಲಹಂಕ ತಾಲ್ಲೂಕಿನ ಅದ್ದಗಾನಹಳ್ಳಿ ಗ್ರಾಮದ ನಿವಾಸಿ ನವೀನ್ (30) ಚಿಕ್ಕನಹಳ್ಳಿ ಗ್ರಾಮದ ಬೈರೇಗೌಡ ಎಂಬುವರ ಮನೆ ಬಳಿ ಬಂದಿದ್ದಾನೆ. ಮನೆಯಲ್ಲಿದ್ದವರು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗುವುದನ್ನು ಗಮನಿಸಿದ್ದಾನೆ.

ಅಕ್ಕಪಕ್ಕ ಯಾರೂ ಇಲ್ಲದನ್ನು ನೋಡಿ ಕಬ್ಬಿಣದ ರಾಡ್‌ನಿಂದ ಮನೆ ಬಾಗಿಲ ಬೀಗ ಮುರಿದು ಒಳನುಗ್ಗಿದ್ದಾನೆ. ಮನೆಯಲ್ಲಿನ ಬೀರು ಬೀಗ ಮುರಿಯುವಾಗ ಪಕ್ಕದ ಮನೆಯವರು ನೋಡಿ ಹೊರಗಿನಿಂದ ಬಾಗಿಲು ಮುಚ್ಚಿ ಬೀಗ ಹಾಕಿದ್ದಾರೆ.

ADVERTISEMENT

ಕಳ್ಳನು ಮನೆಗೆ ನುಗ್ಗಿದ ವಿಷಯವನ್ನು ಮನೆಯ ಪಕ್ಕದವರು ಕೂಡಲೇ ಮನೆಯ ಮಾಲೀಕನಿಗೆ ಹಾಗೂ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕಳ್ಳತನ ವಿಷಯ ಗ್ರಾಮದಲ್ಲಿ ಹರಡುತ್ತಿದಂತೆ ಮನೆ ಬಳಿ ನೂರಾರು ಮಂದಿ ಜಮಾಯಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಕಳ್ಳನನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ವಿಜಯಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಬಳಿ ಜಮಾಯಿಸಿದ್ದ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.