ADVERTISEMENT

ಕೃಷಿಯಲ್ಲಿ ಹೊಸ ಯಾಂತ್ರಿಕತೆ ಅಳವಡಿಸಿಕೊಳ್ಳಿ: ಆರ್.ಬಿ. ನಾಯ್ಕರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 13:48 IST
Last Updated 19 ಜುಲೈ 2024, 13:48 IST
ಸಂಕೇಶ್ವರ ಸಮೀಪದ ಅಮ್ಮಿನಭಾವಿಯಲ್ಲಿ ಸ್ವಾಭಿಮಾನ ಆತ್ಮ ರೈತ ಅಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಏಕಕಾಲಕ್ಕೆ 4 ಸಾಲುಗಳಲ್ಲಿ ಸ್ವಯಂ ಕೀಟನಾಶಕ ಸಿಂಪಡಿಸುವ ಯಂತ್ರವನ್ನು ಉದ್ಘಾಟಿಸಲಾಯಿತು
ಸಂಕೇಶ್ವರ ಸಮೀಪದ ಅಮ್ಮಿನಭಾವಿಯಲ್ಲಿ ಸ್ವಾಭಿಮಾನ ಆತ್ಮ ರೈತ ಅಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಏಕಕಾಲಕ್ಕೆ 4 ಸಾಲುಗಳಲ್ಲಿ ಸ್ವಯಂ ಕೀಟನಾಶಕ ಸಿಂಪಡಿಸುವ ಯಂತ್ರವನ್ನು ಉದ್ಘಾಟಿಸಲಾಯಿತು   

ಸಂಕೇಶ್ವರ: ಕೃಷಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊಸ-ಹೊಸ ಅವಿಷ್ಕಾರಗಳು ನಡೆದಿದ್ದು, ಅದರ ಲಾಭವನ್ನು ರೈತರು ಪಡೆದು ತಮ್ಮ ಉತ್ಪನ್ನ ವೃದ್ಧಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಬಿ. ನಾಯ್ಕರ ಹೇಳಿದರು.

ಸಮೀಪದ ಅಮ್ಮಿನಭಾವಿಯಲ್ಲಿ ಸ್ವಾಭಿಮಾನ ಆತ್ಮ ರೈತ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಏಕ ಕಾಲಕ್ಕೆ 4 ಸಾಲುಗಳಲ್ಲಿ ಸ್ವಯಂ ಕೀಟನಾಶಕ ಸಿಂಪಡಿಸುವ ಯಂತ್ರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಕೆಲಸ ಮಾಡಲು ಜನರು ಸಿಗುತ್ತಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಬೀಜ ಬಿತ್ತನೆ, ರಸ ಗೊಬ್ಬರ ಹಾಕುವಿಕೆ, ಕೀಟನಾಶಕ ಸಿಂಪಡಣೆ ಆಗುತ್ತಿಲ್ಲ. ಇದರಿಂದ ಬೆಳೆಗಳಿಗೆ ಸರಿಯಾದ ಆರೈಕೆ ಆಗುತ್ತಿಲ್ಲ. ಕೃಷಿ ಉತ್ಪನ್ನವು ಕಡಿಮೆಯಾಗುತ್ತಿವೆ. ಕೃಷಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನೂತನ ಸಂಶೋಧನೆಗಳು ನಡೆದಿದ್ದು, ಅಲ್ಲಿ ಬಿತ್ತನೆಗೆ, ರಸಗೊಬ್ಬರ ಹಾಗೂ ಕೀಟನಾಶಕ ಸಿಂಪಡಣೆಗೆ ನೂತನ ಯಂತ್ರಗಳನ್ನು ತಯಾರಿಸಲಾಗುತ್ತಿದ್ದು, ಅದರ ಲಾಭವನ್ನು ರೈತರು ಪಡೆಯಬೇಕು ಎಂದು ಹೇಳಿದರು.

ADVERTISEMENT

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಎ.ನಾಂದಣಿ ಮಾತನಾಡಿ, ತೋಟಗಾರಿಕಾ ಇಲಾಖೆಯಿಂದಲೂ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅದರ ಪ್ರಯೋಜನ ಕೃಷಿಕರು ಪಡೆಯಬೇಕು ಎಂದು ಹೇಳಿದರು.

ಕೃಷಿ ಇಲಾಖೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಸಮೀರ ಲೋಕಾಪುರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಕಾದಂಬರಿ ಪಾಟೀಲ, ಶ್ರದ್ದಾ ಪಾಟೀಲ, ಸಹಕಾರಿ ಧುರೀಣ ಪರಗೌಡ ಪಾಟೀಲ, ನಿರಂಜನ ಪಾಟೀಲ, ಬಸವರಾಜ ಹುಣಚಾಳಿ, ಕಾರ್ಯದರ್ಶಿ ಅಪ್ಪಾಸಾಹೇಬ ನಿರಲಕಟ್ಟಿ, ಸಂಚಾಲಕರಾದ ಅಸಿಫ್ ಮುಲ್ಲಾ, ಬಸ್ಸಪ್ಪಾ ಹುಣಚಾಳಿ, ರಾಮಪ್ಪಾ ಮಗದುಂ, ದುಂಡಪ್ಪಾ ಖಂಡುಗೋಳ, ಬಾಳಪ್ಪಾ ಹುಣಚಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.