ADVERTISEMENT

ಬೆಳಗಾವಿ | ಸೌಂದರ್ಯ ವರ್ಧನೆ ಹೆಸರಲ್ಲಿ ವಂಚನೆ: 10 ಬ್ಯೂಟಿ ಪಾರ್ಲರ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 18:01 IST
Last Updated 15 ಆಗಸ್ಟ್ 2025, 18:01 IST
ಬೆಳಗಾವಿಯ ಬ್ಯೂಟಿ ಪಾರ್ಲರ್‌ ಮೇಲೆ ಗುರುವಾರ ದಾಳಿ ನಡೆಸಿ ಜಪ್ತಿ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ
ಬೆಳಗಾವಿಯ ಬ್ಯೂಟಿ ಪಾರ್ಲರ್‌ ಮೇಲೆ ಗುರುವಾರ ದಾಳಿ ನಡೆಸಿ ಜಪ್ತಿ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ   

ಬೆಳಗಾವಿ: ಸೌಂದರ್ಯವರ್ಧನೆ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ 10 ಬ್ಯೂಟಿ ಪಾರ್ಲರ್‌ಗಳನ್ನು ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಪ್ತಿ ಮಾಡಿದೆ. ಏಳು ಪಾರ್ಲರ್‌ಗಳಿಗೆ ನೋಟಿಸ್‌ ನೀಡಿದೆ.

‘30 ಬ್ಯೂಟಿ ಪಾರ್ಲರ್‌ಗಳ ಮೇಲೆ ದಾಳಿ ನಡೆಸಲಾಗಿತ್ತು. ನಿಯಮ ಉಲ್ಲಂಘನೆ ಮತ್ತು ಹಾನಿಕಾರಕ ಸಾಮಗ್ರಿಗಳ ಬಳಕೆ ಆರೋಪದಡಿ 10 ಪಾರ್ಲರ್‌ ಬಂದ್ ಮಾಡಿದೆವು. ಇಲ್ಲಿ ಕೂದಲು ಕಸಿ, ಕೆಮಿಕಲ್‌ ಬ್ಲೀಚಿಂಗ್‌ ಮಾಡಿ, ಚರ್ಮರೋಗಕ್ಕೆ ಚಿಕಿತ್ಸೆ ನೀಡಲಾಗುತಿತ್ತು. ಅಧಿಕ ಸ್ಟಿರಾಯಿಡ್‌ ಬಳಕೆಯಿಂದ ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡಾದ ತಿಳಿಸಿದರು.

‘ಚರ್ಮರೋಗ ವೈದ್ಯರ ಸಂಘದವರು ಈ ಬಗ್ಗೆ ದೂರು ನೀಡಿದರು. ವಿವಿಧ ತಂಡಗಳಾಗಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದವು’ ಎಂದೂ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.