ADVERTISEMENT

ಮಹಾನಗರಪಾಲಿಕೆ: ಮೀಸಲಾತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 10:54 IST
Last Updated 18 ಜನವರಿ 2021, 10:54 IST

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

2018ರ ಆ.10ರಂದು ಹೊರಡಿಸಲಾಗಿದ್ದ ಅಧಿಸೂಚನೆ ರದ್ದುಪಡಿಸಲಾಗಿದೆ. ಈಗ ಕರಡು ಮೀಸಲಾತಿಯನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ ಲಿಖಿತವಾಗಿ ಕಾರಣಸಹಿತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನಗರಪಾಲಿಕೆಗೆ ಚುನಾವಣೆ ನಡೆಸಲು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿತ್ತು. ವಾರ್ಡ್ ಮರು ವಿಂಗಡಣೆ, ಮೀಸಲು ಅಧಿಸೂಚನೆ, ಮತದಾರರ ಪಟ್ಟಿ ಮತ್ತು ವೇಳಾಪಟ್ಟಿ ಪ್ರಕಟಿಸಿ ನಂತರ 45 ದಿನಗಳಲ್ಲಿ ಚುನಾವಣೆ ನಡೆಸಬೇಕು ಎಂದು ಆದೇಶಿಸಿದೆ.

ADVERTISEMENT

ಬೆಳಗಾವಿ ನಗರಪಾಲಿಕೆ ಅವಧಿ 2019 ಮಾರ್ಚ್‌ 9ರಂದು ಕೊನೆಗೊಂಡಿದೆ. ಅಲ್ಲಿಂದ ಇಲ್ಲಿವರೆಗೆ ಚುನಾವಣೆ ನಡೆದಿಲ್ಲ.

ಇದೀಗ, ಮೀಸಲಾತಿ ಪ್ರಕಟವಾಗಿದೆ. ಇದರೊಂದಿಗೆ ಚುನಾವಣೆಗೆ ಪೂರ್ವ ಪ್ರಕ್ರಿಯೆಗಳು ಆರಂಭವಾದಂತಾಗಿದೆ.

ಮೀಸಲಾತಿ

ವಾರ್ಡ್‌; ಮೀಸಲಾದ ವರ್ಗ

1;ಹಿಂದುಳಿದ ವರ್ಗ ‘ಎ’ ಮಹಿಳೆ

2;ಸಾಮಾನ್ಯ

3;ಹಿಂದುಳಿದ ವರ್ಗ ‘ಬಿ’ ಮಹಿಳೆ

4;ಸಾಮಾನ್ಯ

5;ಸಾಮಾನ್ಯ ಮಹಿಳೆ

6;ಹಿಂದುಳಿದ ವರ್ಗ ‘ಎ’

7;ಹಿಂದುಳಿದ ವರ್ಗ ‘ಬಿ’

8;ಸಾಮಾನ್ಯ

9.ಹಿಂದುಳಿದ ವರ್ಗ ‘ಎ’ ಮಹಿಳೆ

10;ಹಿಂದುಳಿದ ವರ್ಗ ‘ಬಿ’ ಮಹಿಳೆ

11;ಸಾಮಾನ್ಯ

12;ಹಿಂದುಳಿದ ವರ್ಗ ‘ಎ’

13;ಸಾಮಾನ್ಯ ಮಹಿಳೆ

14;ಹಿಂದುಳಿದ ವರ್ಗ ‘ಬಿ’

15;ಹಿಂದುಳಿದ ವರ್ಗ ‘ಎ’ ಮಹಿಳೆ

16;ಸಾಮಾನ್ಯ

17;ಪರಿಶಿಷ್ಟ ಜಾತಿ ಮಹಿಳೆ

18;ಸಾಮಾನ್ಯ

19;ಹಿಂದುಳಿದ ವರ್ಗ ‘ಎ’

20;ಸಾಮಾನ್ಯ ಮಹಿಳೆ

21;ಹಿಂದುಳಿದ ವರ್ಗ ‘ಎ’ ಮಹಿಳೆ

22;ಸಾಮಾನ್ಯ

23;ಸಾಮಾನ್ಯ

24;ಹಿಂದುಳಿದ ವರ್ಗ ‘ಎ’

25;ಸಾಮಾನ್ಯ ಮಹಿಳೆ

26;ಹಿಂದುಳಿದ ವರ್ಗ ‘ಎ’ ಮಹಿಳೆ

27;ಸಾಮಾನ್ಯ

28;ಪರಿಶಿಷ್ಟ ಜಾತಿ

29;ಸಾಮಾನ್ಯ

30;ಹಿಂದುಳಿದ ವರ್ಗ ‘ಎ’

31;ಹಿಂದುಳಿದ ವರ್ಗ ‘ಎ’ ಮಹಿಳೆ

32;ಪರಿಶಿಷ್ಟ ಜಾತಿ

33;ಸಾಮಾನ್ಯ ಮಹಿಳೆ

34;ಸಾಮಾನ್ಯ

35;ಪರಿಶಿಷ್ಟ ಜಾತಿ ಮಹಿಳೆ

36;ಸಾಮಾನ್ಯ

37;ಸಾಮಾನ್ಯ ಮಹಿಳೆ

38;ಹಿಂದುಳಿದ ವರ್ಗ ‘ಎ’

39;ಸಾಮಾನ್ಯ

40;ಹಿಂದುಳಿದ ವರ್ಗ ‘ಎ’ ಮಹಿಳೆ

41;ಸಾಮಾನ್ಯ

42;ಹಿಂದುಳಿದ ವರ್ಗ ‘ಎ’

43;ಸಾಮಾನ್ಯ ಮಹಿಳೆ

44;ಸಾಮಾನ್ಯ

45;ಪರಿಶಿಷ್ಟ ಪಂಗಡ ಮಹಿಳೆ

46;ಸಾಮಾನ್ಯ

47;ಸಾಮಾನ್ಯ ಮಹಿಳೆ

48;ಹಿಂದುಳಿದ ವರ್ಗ ‘ಎ’

49;ಸಾಮಾನ್ಯ ಮಹಿಳೆ

50;ಸಾಮಾನ್ಯ ಮಹಿಳೆ

51;ಪರಿಶಿಷ್ಟ ಪಂಗಡ

52;ಸಾಮಾನ್ಯ ಮಹಿಳೆ

53;ಪರಿಶಿಷ್ಟ ಪಂಗಡ

54;ಸಾಮಾನ್ಯ ಮಹಿಳೆ

55;ಸಾಮಾನ್ಯ ಮಹಿಳೆ

56;ಸಾಮಾನ್ಯ

57;ಸಾಮಾನ್ಯ ಮಹಿಳೆ

58;ಸಾಮಾನ್ಯ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.