ADVERTISEMENT

ನಕಲಿ ಗುರುತಿನ ಚೀಟಿ ತಯಾರಿ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮೇ 2021, 16:43 IST
Last Updated 10 ಮೇ 2021, 16:43 IST
ನಕಲಿ ಗುರುತಿನ ಚೀಟಿ ತಯಾರಿ
ನಕಲಿ ಗುರುತಿನ ಚೀಟಿ ತಯಾರಿ   

ಬೆಳಗಾವಿ: ಇಲ್ಲಿನ ಕಡೋಲ್ಕರ್‌ ಗಲ್ಲಿಯಲ್ಲಿ ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲೂ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿದ್ದ ಇಬ್ಬರನ್ನು ಪೊಲೀಸರು ಸೋಮವಾರ ರಾತ್ರಿ ದಿಢೀರ್ ದಾಳಿ ನಡೆಸಿ ಬಂಧಿಸಿದ್ದಾರೆ.

ವಿಶ್ವನಾಥ ಮುಚ್ಚಂಡಿ ಮತ್ತು ರೋಹಿತ್ ಸುನೀಲ್ ಕುಟರೆ ಬಂಧಿತರು. ಅವರು ‘ಮುಚ್ಚಂಡಿ ಪ್ರಿಂಟರ್ಸ್‌’ ಎನ್ನುವ ಅಂಗಡಿ ತೆರೆದಿದ್ದರು. ಅವರಿಂದ ಕಂಪ್ಯೂಟರ್‌, ಪ್ರಿಂಟರ್ ಮೊದಲಾದ ಸಾಮಗ್ರಿಗಳು ಮತ್ತು ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ.

‘ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದನ್ನು ಬಳಸಿಕೊಂಡು, ಕೆಲವು ನಕಲಿ ಗುರುತಿನ ಚೀಟಿಗಳನ್ನು ಅವರು ತಯಾರಿಸಿಕೊಡುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಖಚಿತ ಮಾಹಿತಿ ಮೇರೆಗೆ ಡಿಸಿಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಧೀರಜ್ ಶಿಂಧೆ, ಪಿಎಸ್ಐ ಸೌದಾಗಾರ, ಎಎಸ್ಐ ಹುಂಡೇಕರ ಪಾಲ್ಗೊಂಡಿದ್ದರು. ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.