ADVERTISEMENT

ಮಂತ್ರಿಯಾದ ದಿನವೇ ಅಜ್ಜಿಯಾದ ಲಕ್ಷ್ಮೀ ಹೆಬ್ಬಾಳಕರ; ಕಾಂಗ್ರೆಸ್ ನಾಯಕಿಗೆ ಡಬಲ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಮೇ 2023, 11:29 IST
Last Updated 27 ಮೇ 2023, 11:29 IST
ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮೀ ಹೆಬ್ಬಾಳಕರ   

ಬೆಳಗಾವಿ: ಮೊದಲ ಬಾರಿಗೆ ಮಂತ್ರಿ ಸ್ಥಾನ ಪಡೆದ ಖುಷಿಯಲ್ಲಿರುವ ಲಕ್ಷ್ಮೀ ಹೆಬ್ಬಾಳಕರ ಅವರ ಪಾಲಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಮಿನಿಸ್ಟರ್ ಕುರ್ಚಿ ಜತೆಗೇ ಅವರಿಗೆ ಅಜ್ಜಿ ಪದವಿಯೂ ಸಿಕ್ಕಿದೆ.

ಲಕ್ಷ್ಮೀ ಅವರ ಪುತ್ರ ಮೃಣಾಲ್ ಹಾಗೂ ಸೊಸೆ ಡಾ.ಹಿತಾ ಅವರಿಗೆ ಶುಕ್ರವಾರ ತಡರಾತ್ರಿ ಹೆಣ್ಣುಮಗು ಜನಿಸಿದೆ.

ಬೆಂಗಳೂರಿನಲ್ಲಿ ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮುಂಚೆ ಅವರಿಗೆ ಅಜ್ಜಿಯಾದ ಹಿರಿಮೆಯೂ ಸಿಕ್ಕಿದೆ.

ADVERTISEMENT

ಇದರಿಂದ ಅವರ ಮನೆಯಲ್ಲಿ ಈಗ ಡಬಲ್ ಸಂಭ್ರಮ ನೆಲೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.