ADVERTISEMENT

ಮೋದಿ ವಿರುದ್ಧ ಪೋಸ್ಟ್‌: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:15 IST
Last Updated 14 ಫೆಬ್ರುವರಿ 2026, 6:15 IST
ರಾಮದುರ್ಗದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾ ಸದಸ್ಯರು ಕಾಂಗ್ರೆಸ್‌ ಕಾರ್ಯಕರ್ತರ ನಡೆ ಖಂಡಿಸಿ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು
ರಾಮದುರ್ಗದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾ ಸದಸ್ಯರು ಕಾಂಗ್ರೆಸ್‌ ಕಾರ್ಯಕರ್ತರ ನಡೆ ಖಂಡಿಸಿ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು   

ರಾಮದುರ್ಗ: ರಾಜ್ಯದ ತುಂಬೆಲ್ಲ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡಿಸಿ ರಾಮದುರ್ಗ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.

ಮೋದಿ ಅವಹೇಳನ ಮುಂದುವರೆದರೆ ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ಶಾಲಿನಿ ಈಳಿಗೇರ ಎಚ್ಚರಿಕೆ ನೀಡಿದರು.

ಜಿಲ್ಲಾ ಮಹಿಳಾ ಮೋರ್ಚಾ ರಾಮದುರ್ಗ ಮಂಡಲ ಅಧ್ಯಕ್ಷೆ ರಾಧಿಕಾ ಧೂತ್, ಅಕ್ಷತಾ ನಂದರಿಗಿ, ರುದ್ರಮ್ಮ ಕಲ್ಲೂರು, ರತ್ನಕ್ಕ ಕಡಕೋಳ, ಶಂಕರವ್ವ ನಂದಿ, ಮಾದೇವಿ ಶಿರಸಂಗಿ, ಮಂಜುಳಾ ಶಿರಸಂಗಿ, ಸವಿತಾ ಕೋಪರ್ಡೆ, ಶಂಕ್ರವ ಕೋಪರ್ಡೆ, ಚಂದ್ರವ್ವ ಸುಳಿಭಾವಿ, ಸಾವಕ್ಕ ಶಿರಸಂಗಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.