ADVERTISEMENT

ಚಿಕ್ಕೋಡಿ: ₹90 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:23 IST
Last Updated 20 ನವೆಂಬರ್ 2025, 2:23 IST
ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಗ್ರಾಮದಲ್ಲಿ ₹ 20 ಲಕ್ಷ ಅನುದಾನದಲ್ಲಿ ಅಂಗನವಾಡಿ ಕೇಂದ್ರದ ನಿರ್ಮಾಣ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ಮಹೇಶ ಭಾತೆ, ಆನಂದ ಕೋಳಿ, ರಾಜು ಹರಗನ್ನವರ ಇತರರು ಇದ್ದಾರೆ.
ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಗ್ರಾಮದಲ್ಲಿ ₹ 20 ಲಕ್ಷ ಅನುದಾನದಲ್ಲಿ ಅಂಗನವಾಡಿ ಕೇಂದ್ರದ ನಿರ್ಮಾಣ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ಮಹೇಶ ಭಾತೆ, ಆನಂದ ಕೋಳಿ, ರಾಜು ಹರಗನ್ನವರ ಇತರರು ಇದ್ದಾರೆ.   

ಚಿಕ್ಕೋಡಿ: ತಾಲ್ಲೂಕಿನ ಜೈನಾಪುರ, ಹತ್ತರವಾಟ ಹಾಗೂ ಮಜಲಟ್ಟಿ ಗ್ರಾಮಗಳಲ್ಲಿ ₹ 90 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಬುಧವಾರ ಭೂಮಿಪೂಜೆ ನೆರವೇರಿಸಿದರು.

₹ 40 ಲಕ್ಷ ಮೊತ್ತದಲ್ಲಿ ಜೈನಾಪುರ ಗ್ರಾಮದ ಎಸ್‌ಸಿ ಕಾಲೊನಿಯಲ್ಲಿ ರಸ್ತೆ ನಿರ್ಮಾಣ, ಹತ್ತರವಾಟದಲ್ಲಿ ₹ 30 ಲಕ್ಷ ಮೊತ್ತದಲ್ಲಿ ಎಸ್‌ಸಿ ಕಾಲೊನಿಯಲ್ಲಿ ಕುಡಿಯುವ ನೀರು ಪೂರೈಕೆ, ಸ್ಮಶಾನ ನಿರ್ಮಾಣ ಹಾಗೂ ಮಜಲಟ್ಟಿ ಗ್ರಾಮದಲ್ಲಿ ₹ 20 ಲಕ್ಷ ಅನುದಾನದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಮಜಲಟ್ಟಿಯ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಜು ಹರಗನ್ನವರ, ವಿಜಯ ಕೋಠಿವಾಲೆ ಎಸ್‌.ಎಸ್. ಹೊಸಮನಿ, ಗುತ್ತಿಗೆದಾರ ರಾಮನಗೌಡ ಪಾಟೀಲ, ರವಿ ಹಿರೇಕೋಡಿ, ರಾಜು ನಾಯಿಕ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.