ಬೆಳಗಾವಿ: ಕೋವಿಡ್-19 ಸೋಂಕಿನ ಭೀತಿ ಹರಡುತ್ತಿರುವುದರಿಂದಾಗಿ, ನಗರದಲ್ಲ ಹೋಳಿ ಹಬ್ಬವನ್ನು ಸಾಮೂಹಿಕ ಆಚರಣೆ ಮಾಡುತ್ತಿಲ್ಲ.
ಪ್ರತಿ ವರ್ಷ ಬೆಳಗಾವಿಯಲ್ಲಿ ಕಲರ್‌ಫುಲ್ ಹೋಳಿ ಆಚರಿಸಲಾಗುತ್ತಿತ್ತು. ಶಾಸಕ ಅಭಯ ಪಾಟೀಲ ಆಯೋಜಿಸುತ್ತಿದ್ದ 'ಹೋಳಿ ಮಿಲನ್' ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆಯೋಜಿಸುತ್ತಿದ್ದ 'ವುಮೇನಿಯಾ ಹೋಳಿ' ಕಾರ್ಯಕ್ರಮ ರದ್ದುಪಡಿಸಲಾಗಿದೆ. ಇವುಗಳಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು.
ಮುಂಜಾಗ್ರತಾ ಕ್ರಮವಾಗಿ ಈ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೋಳಿಯ ರಂಗು ಮಾಸಿದೆ.
ಮನೆಗಳ ಬಳಿ ಮಕ್ಕಳು ಹಾಗೂ ಸ್ಥಳೀಯರು ಬಣ್ಣದಾಟ ಆಡಿ ಸಂಭ್ರಮ ಆಚರಿಸಿದರು. ಸೋಮವಾರ ರಾತ್ರಿ ಸೌದೆಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿ 'ಕಾಮದಹನ' ಮಾಡುವ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.