ADVERTISEMENT

ವಿಮಾನ ಸೇವೆಗೆ ಸಾಂಬ್ರಾದಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 11:25 IST
Last Updated 24 ಮೇ 2020, 11:25 IST
ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ  ಮಾಡಿರುವ ಸಿದ್ಧತೆಯನ್ನು ನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ಪರಿಶೀಲಿಸಿದರು
ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ  ಮಾಡಿರುವ ಸಿದ್ಧತೆಯನ್ನು ನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ಪರಿಶೀಲಿಸಿದರು   

ಬೆಳಗಾವಿ: ಇಲ್ಲಿನ ಸಾಂಬ್ರಾದಿಂದ ಮೇ 25ರಿಂದ (ಸೋಮವಾರ) ದೇಶದ ವಿವಿಧ ನಗರಗಳಿಗೆ ವಿಮಾನಗಳ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ವಿವಿಧ ವಿಮಾನಯಾನ ಕಂಪನಿಗಳು ಇಲ್ಲಿಂದ ಹಂತ ಹಂತವಾಗಿ ಬೆಂಗಳೂರು, ಹೈದರಾಬಾದ್, ಪುಣೆ, ಮೈಸೂರು, ಕಡಪಾ, ಇಂದೋರ್, ಅಹಮದಾಬಾದ್ ನಗರಗಳಿಗೆ ವಿಮಾನಯಾನ ಆರಂಭಿಸಲಿವೆ. ನಿಲ್ದಾಣದ ಪ್ರವೇಶದ್ವಾರದಲ್ಲಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು. ಮಾಸ್ಕ್‌ ಧರಿಸದಿದ್ದರೆ ಪ್ರವೇಶ ನೀಡುವುದಿಲ್ಲ. ಆವರಣದಲ್ಲಿ ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಕುರ್ಚಿ ಬಿಟ್ಟು ಕುರ್ಚಿಗೆ ‘ಇಲ್ಲಿ ಕುಳಿತುಕೊಳ್ಳುವಂತಿಲ್ಲ’ ಎಂಬ ಸ್ಟಿಕ್ಕರ್ಅಂಟಿಸಲಾಗಿದೆ. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT