
ಹಿರೇಬಾಗೇವಾಡಿ: ಪ್ರತಿಯೊಬ್ಬ ಹಿಂದೂ ಒಗ್ಗಟ್ಟಾಗುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಅವರು ಹೇಳಿದರು.
ಗ್ರಾಮದಲ್ಲಿ ಗುರುವಾರ ಜರುಗಿದ ‘ವಿರಾಟ ಹಿಂದೂ ಸಮಾವೇಶ’ ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪೂರ್ವಿಕರ ಶ್ರಮ ಹಾಗೂ ಬಲಿದಾನದಿಂದಾಗಿ ಸನಾತನ ಹಿಂದೂ ಧರ್ಮವು ಇನ್ನೂ ಜೀವಂತವಿದ್ದು ಅದರ ಪಾಲನೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ ಎಂದರು.
ಆರ್‌ಎಸ್‌ಎಸ್ ಪ್ರಮುಖರಾದ ರಾಮಚಂದ್ರ ಎಡಕೆ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ ಮರೆಯುತ್ತಿದ್ದು ಧರ್ಮ ಹಾಗೂ ಸಂಸ್ಕೃತಿಯ ಉಳವಿಗಾಗಿ ಯುವಕರ ಪ್ರಯತ್ನ ಅಗತ್ಯವಿದೆ ಎಂದರು.
ಅರಳೀಕಟ್ಟಿ ತೋಂಟೇಶ್ವಬರ ವಿರಕ್ತ ಮಠದ ಶಿವಮೂರ್ತಿ ಸ್ವಾಮಿಗಳು, ತಾರೀಹಾಳದ ಅಡವೀಶ ದೇವರು, ಹೊನ್ನಿಹಾಳದ ಬಸವರಾಜ ದೇವರು ಮಾತನಾಡಿದರು.
ಹಿರೇಬಾಗೇವಾಡಿ ವಿರಾಟ ಹಿಂದೂ ಸಮಾವೇಶ ಸಮಿತಿಯ ಅಧ್ಯಕ್ಷ ಈರಣ್ಣ ರೊಟ್ಟಿ, ಗೌರವಾಧ್ಯಕ್ಷ ರಮೇಶಗೌಡ ಪಾಟೀಲ, ರಾಮಚಂದ್ರ ಏಡಕೆ, ನಾಗೇಂದ್ರ ಸ್ವಾಮಿಗಳು, ಶಿವಮೂರ್ತಿ ಸ್ವಾಮಿಗಳು, ಅಡವೀಶ ದೇವರು, ಬಸವರಾಜ ದೇವರು, ಬಡಾಲ ಅಂಕಲಗಿಯ ರಾಚಯ್ಯ ಸ್ವಾಮಿಗಳು, ಜಾಲಿಕರೆಮ್ಮ ದೇವಸ್ಥಾನದ ಉಳವಪ್ಪಜ್ಜ ವೇದಿಕೆಯಲ್ಲಿದ್ದರು.
ಶೋಭಾ ಯಾತ್ರೆ: ಸಮಾವೇಶದ ನಿಮಿತ್ತ ಭವ್ಯ ಶೋಭಾಯಾತ್ರೆಯು ಇಲ್ಲಿನ ಬಸವ ವೃತ್ತದಿಂದ ಆರಂಭಗೊಂಡು ಬೈಲಹೊಂಗಲ ರಸ್ತೆ ಮಾರ್ಗವಾಗಿ ಪಡಿಬಸವೇಶ್ವರ ದೇವಸ್ಥಾನದ ಬಳಿಯ ಕಾರ್ಯಕ್ರಮದ ವೇದಿಕೆಯಲ್ಲಿ ಕೊನೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.