ADVERTISEMENT

ಬೆಳಗಾವಿ | ವಾಕ್‌, ಶ್ರವಣ ದೋಷ ತ್ವರಿತವಾಗಿ ಗುರುತಿಸಿ: ಡಾ.ಪಲ್ಲವಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 12:01 IST
Last Updated 23 ಡಿಸೆಂಬರ್ 2021, 12:01 IST
ತೆಲಸಂಗದ ‘ನಮ್ಮೂರ ಶಾಸಕರ ಸರ್ಕಾರಿ ಶಾಲೆ’ಯಲ್ಲಿ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಡಾ.ಪಲ್ಲವಿಅಡಿಗ ಉಪನ್ಯಾಸ ನೀಡಿದರು
ತೆಲಸಂಗದ ‘ನಮ್ಮೂರ ಶಾಸಕರ ಸರ್ಕಾರಿ ಶಾಲೆ’ಯಲ್ಲಿ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಡಾ.ಪಲ್ಲವಿಅಡಿಗ ಉಪನ್ಯಾಸ ನೀಡಿದರು   

ತೆಲಸಂಗ: ‘ಚಿಕ್ಕ ಮಕ್ಕಳಲ್ಲಿ ವಾಕ್‌ ಮತ್ತು ಶ್ರವಣ ದೋಷಗಳನ್ನು ಆದಷ್ಟು ಬೇಗನೆ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದು ಡಾ.ಪಲ್ಲವಿ ಅಡಿಗ ಸಲಹೆ ನೀಡಿದರು.

ಗ್ರಾಮದ ‘ನಮ್ಮೂರ ಶಾಸಕರ ಸರ್ಕಾರಿ ಶಾಲೆ’ಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರದ ಪಂಕ್ ಟು ಡಿಸೈರ್ ಚಾರಿಟಬಲ್ ಟ್ರಸ್ಟ್‌, ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗುರುವಾರ ನಡೆದ ‘ಶ್ರವಣದೋಷ ಮತ್ತು ಬೆಳವಣಿಗೆ ಕುಂಠಿತ’ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಸಹಜವಾಗಿ ಮಾತನಾಡುತ್ತಿದ್ದಾರೆಯೇ, ಕೇಳಿಸಿಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ಪೋಷಕರು ಗುರುತಿಸಬೇಕು. ಶ್ರವಣ ಶಕ್ತಿ ನಷ್ಟ, ವಾಕ್‌ ಸಮಸ್ಯೆ, ತೊದಲುವಿಕೆ, ಗ್ರಹಿಸದಿರುವುದಕ್ಕೆ ಮೊದಲಾದವುಗಳಿಗೆ ಚಿಕಿತ್ಸೆ ಕೊಡಿಸಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ್ ಮೋರೆ, ಡಾ.ಬಿ.ಎಸ್. ಕಾಮನ್, ಡಾ.ಶ್ರೀಶೈಲ ಇಂಚಗೇರಿ, ವಕೀಲ ದಾನೇಶ ಅವಟಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಮೀನಾಕ್ಷಿ ಬಾಣಿ, ವೈದ್ಯಾಧಿಕಾರಿ ಡಾ.ವಾಸಂತಿ, ಮೇಲ್ವಿಚಾರಕಿ ಎಸ್.ಎಸ್. ಶಾಸ್ತ್ರೀಮಠ, ಡಾ.ಉದಯ ಆಯಾಚಿತ, ಡಾ.ವೈಭವ ಬಳ್ಳೋಳ್ಳಿ, ಡಾ.ಪ್ರಕಾಶ ಕೋಡ್ನಿ, ಡಾ.ರಾವಸಾಬ ಬಡಿಗೇರ, ಸಿದ್ದಲಿಂಗ ಮಾದರ, ವಿನೋದ ಪಾಟೀಲ ಉಪಸ್ಥಿತರಿದ್ದರು.

ಶಿಕ್ಷಕ ಮಹಾದೇವ ಕಂದಾರೆ ನಿರೂಪಿಸಿದರು. ಸಿಆರ್‌ಪಿ ಶಿವಾನಂದ ಪೂಜಾರಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಬಿ.ಎಸ್. ಶೆಲ್ಲೆಪ್ಪಗೋಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.